ಚಳ್ಳಕೆರೆ ಕಾಡು ಗೊಲ್ಲ ಸಮುದಾಯದ ಮರುವಾಯಿ ಅಜ್ಜಣ್ಣ ಭಕ್ತರೊಬ್ಬರ ಮನೆಯಿಂದ ಬೆಣ್ಣೆ ತೆಗೆದುಕೊಂಡು ಹೋಗಿ ವಸಿಲು ದೀಪ ಹಚ್ಚಿದ ನಂತರವೇ ಅಲ್ಲಿನ ಪೂಜೆ ವಿಧಿ ವಿಧಾನಗಳು ನೆರವೇರುತ್ತವೆ ಚಳ್ಳಕೆರೆ ತಾಲೂಕಿನ ಪುರಲೆಹಳ್ಳಿ ಸಮೀಪ ನಡೆಯಲಿರುವ ಕ್ಯಾತಪ್ಪನ ಪರೀಕ್ಷೆಗೆ ಪೂಜಾ ಕಾರ್ಯಗಳು ನಡೆಯುತ್ತಿವೆ.
ಅದರಂತೆ ಬೆಣ್ಣೆ ತೆಗೆದುಕೊಂಡು ಹೋಗುವ ಕಾರ್ಯವು ನಡೆದಿದ್ದು ಬೆಣ್ಣೆ ತೆಗೆಯುವ ಕಾರ್ಯವು ಈ ರೀತಿ ನಡೆಯುತ್ತದೆ.ಕಟ್ಟು ನಿಟ್ಡಿನಿಂದ ಹಸುವಿನ ಹಾಲು ಕರೆದು ಹೊಸ ಮಡಿಕೆ ತಂದು ಭಕ್ತಿಯಿಂದ ಹಾಲುಕಾಯಿಸಿ ಹಾಲಿಗೆ ಎಪ್ಪು ಹಾಕಿ ಎರಡು ದಿನ ನಂತರವೆ ಮೊಸರ ಕಡೆಯುವ ಕಾರ್ಯ ನಡಯುತ್ತದೆ. ಕಳ್ಳಿ ಮರದ ಕೊಂಬೆಯನ್ನು ನೆಡಸಿ . ಆ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಕುಂಬಾರರ ಹತ್ತಿರ ನಾಲ್ಕು ನೂತನ ಮಡಿಕೆ ತಂದು ಕೆನೆ ಮೊಸರನ್ನು ಹೊಸ ಕುಂಭದಲ್ಲಿ ಹಾಕಿ ಕಡಗೋಲಿನಿಂದ ಮೊಸರು ಕಡಿಯುವ ಕಾರ್ಯ ನಡೆಯುತ್ತದೆ ಮೊಸರು ಕಡಿಯುವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೊಸರುಕಡಯುತ್ತಾರೆ.ಮೊಸರಿನಿಂದ ಬಂದ ಬೆಣ್ಣೆಯನ್ನು ಹೊಸ ಮಡಿಕೆಯಲ್ಲಿ ಹಾಕಿ ಪೂಜೆ ಸಲ್ಲಿಸಿ ಚಳ್ಳಕೆರೆ ಯಿಂದ ವಸಿಲು ದಿನ್ನೆಗೆ ನಡೆದುಕೊಂಡು ಹೋಗಿ ಕೊಡುತ್ತಾರೆ ಈ ಭಕ್ತಿಯ ಬೆಣ್ಣೆಯಿಂದ ದೀಪ ಹಚ್ಚಿದ ನಂತರವೆ ಪೂಜೆ ಕಾರ್ಯಗಳ ನೆರೆವೇರುತ್ತವೆ