ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಸ್ಮಶಾನ ಹಾಗೂ ನಿವೇಶನಕ್ಕೆ ಹಲವಾರು ಸಭೆಗಳನ್ನು ಮಾಡಿದ್ದೆವೆ, ಆದರೆ ಅಧಿಕಾರಿಗಳು ಇನ್ನು ನಿದ್ದೆಯ ಮಂಪರಿನಲ್ಲಿದ್ದರೀ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಗರಂ ಹಾದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಗ್ರಾಮೀಣ ಪ್ರದೇಶದಲ್ಲಿ ಮುಗ್ದ ಜನರು ನಿವೇಶನವಿಲ್ಲದೆ ಕಛೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ. ಇನ್ನು ಜೀವಂತ ಇರುವಾಗ ಏನೇ ಸಾಧನೆ ಮಾಡಿದರು ಅವರು ಮರಣ ಹೊಂದಿದ ಮೇಲೆ ಕನಿಷ್ಠ ಮಣ್ಣು ಮಾಡಲು ಜಾಗ ವಿಲ್ಲದೆ ಇರುವುದು ವಿಪರ್ಯಾಸ ಆದ್ದರಿಂದ ಕಳೆದ ಮೂರು ತಿಂಗಳಲ್ಲಿ ಎರಡು ಘಟನೆಗಳು ನಮ್ಮ ಕಣ್ಣಾ ಮುಂದೆ ಇವೆ, ಅಂತಹ ಮೃತ ದೇಹವನ್ನು ಮನೆ ಮುಂದೆ ಇಟ್ಟುಕೊಂಡು ಮಣ್ಣು ಮಾಡಲು ಜಾಗಕ್ಕೆ ಅಲೆಯಬಾರದು ಆದ್ದರಿಂದ ನಿಮ್ಮ ಮೊದಲ ಆಧ್ಯತೆ ಸ್ಮಶಾನ ಹಾಗೂ ನಿವೇಶನ ತದನಂತರ ಬೇರೆ ಕಾರ್ಯ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್‌ಹಾಗಿ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಕಳೆದ ಹಲವು ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಕಂದಾಯ ಇಲಾಖೆಯ ಮೊದಲ ಆಧ್ಯತೆಯಾಗಿ ಸುಮಾರು ಗ್ರಾಮಗಳಿಗೆ ಸ್ಮಶಾನ ಹಾಗೂ ನಿವೇಶನ ನೀಡುವ ಕಾರ್ಯವಾಗಿದೆ, ಆದರೆ ಅಭಿವೃದ್ದಿ ಪಡಿಸಬೇಕಾದ ಸಂಧರ್ಭದಲ್ಲಿ ಕೊಂಚ ಕಾಲ ವಿಳಂಭವಾಗಿದೆ ಇದಾಗ್ಯೂ ರಸ್ತೆ, ಈಗೇ ಹಲವು ಪ್ರರಕಣರಗಳನ್ನು ಗಮನದಲ್ಲಿಸಿರಿಕೊಂಡು ಪ್ರಗತಿಯತ್ತ ಸಾಗಿದ್ದೆವೆ, ಮುಂದಿನ ವಾರದಲ್ಲಿ ತಾಲೂಕು ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯದಲ್ಲಿ ಈಡೀ ತಾಲೂಕಿನಲ್ಲಿ ಸ್ಮಶಾನ ಮುಕ್ತ ಗ್ರಾಮಗಳನ್ನಾಗಿ ಮಾಡಲು ಪಣತೊಟ್ಟಿದ್ದೆವೆ ಕಾಲವಕಾಶ ಬೇಕು ಎಂದರು.
ಇನ್ನೂ ತಾಪಂ.ಇಓ.ಹೊನ್ನಯ್ಯ, ನಮ್ಮ ನರೇಗಾ ಯೋಜನೆಯಲ್ಲಿ ಈಗಾಗಲೇ ಎಲ್ಲಾ ಕಾಮಗಾರಿಗಳಿಗೆ ಅನಮೋಧನೆ ನೀಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದೆ, ಅದರಂತೆ ರೇಷ್ಮೇ, ಕೃಷಿ, ತೋಟಗಾರಿಕೆ ಬೆಳೆಗಳಿಗೆ ನರೇಗಾ ಕಾಮಗಾರಿಯಲ್ಲಿ ಅವಕಾಶ ನೀಡಲಾಗದೆ ಎಂದು ಸಭೆಯ ಗಮನಕ್ಕೆ ತಂದರು.
ಇನ್ನು ತಾಪಂ.ನರೇಗಾ ಸಹಯಾಕ ಅಧಿಕಾರಿ ಸಂತೋಷ್ ಮಾತನಾಡಿ, ಗ್ರಾಮೀಣ ಉದ್ಯೋಗಸ್ಥರಿಗೆ ನೂತನವಾಗಿ ಸರಕಾರದಿಂದ ಬಂದ ಜಲ ಸಂಜೀವಿನಿ ಯೋಜನೆ ವರದಾನವಾಗಿದೆ, ಇದರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮುಂದಿನ ಮೂರು ವರ್ಷಗಳ ಕಾಮಗಾರಿಗಳ ಯೋಜನೆ ಒಂದೇ ಭಾರಿಗೆ ಅನುಮೊಧನೆ ಪಡೆಯಬಹುದು ಆದ್ದರಿಂದ ಎಲ್ಲಾ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ವರದಾನವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ತಾಪಂ. ಸಂಪತ್, ಎಇಇ ಕಾವ್ಯ, ಕೃಷಿ ಇಲಾಖೆ ಸಹಾಯಕ ಅಧಿಕಾರಿ ರವಿ, ಪಶು ಇಲಾಕೆ ಅದಿಕರಿ ರೇವಣ್ಣ, ದಯಾನಂದ, ಹಾಗೂ ಎಲ್ಲಾ ಪಿಡಿಓಗಳು ಕಂದಾಯ ಅಧಿಕಾರಿಗಳು ಹಾಜರಿದ್ದರು,