ಹೆಚ್‌ಪಿಪಿಸಿ.ಪ್ರಥಮದರ್ಜೆ ಕಾಲೇಜು ಹಿಂಬಾಗದ ಕಲ್ಲು ಕ್ಯಾರಿಯಲ್ಲಿ ಅನಾಮದೇಯ ಮೃತ ದೇಹ ಪತ್ತೆ
ಚಳ್ಳಕೆರೆ : ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಹಿಂಬಾಗದ ಕಲ್ಲು ಕ್ಯಾರಿಯಲ್ಲಿ ಅನಾಮದೇಯ ಮೃತ ದೇಹ ಪತ್ತೆಯಾದ ಘಟನೆ ಜರುಗಿದೆ.
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಕಲ್ಲು ಕ್ಯಾರಿಯಲ್ಲಿ ಮೃತ ದೇಹ ಪತ್ತೆಯಾಗಿರುವುದು ಜನರರಲ್ಲಿ ಆತಂಕ ಮೂಡಿದೆ, ಸರಿ ಸುಮಾರು ವಯಸ್ಸಾದ ಮೃತ ಮಹಿಳೆಯ ಶವ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಇನ್ನೂ ಪೊಲೀಸ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಆದರೆ ಸಂಜೆವರೆಗೆ ಕಾದರು ಯಾರು ಕೂಡ ಮೃತದೇಹದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಇನ್ನೂ ಶವಗಾರದಲ್ಲಿ ಮೃತವನ್ನು ಇಡಲಾಗಿದೆ.
ಕಲ್ಲು ಕ್ಯಾರಿಯ ಸಮೀಪದಲ್ಲೆ ಕಾಲೇಜಿನ ಕಟ್ಟಡ ಇರುವುದರಿಂದ ಕಾಲೇಜಿನ ವಿದ್ಯಾರ್ಥಿಗಳು ಆತಂಹಕದಲ್ಲಿ ಇದ್ದಾರೆ, ಇನ್ನೂ ದಿನ ಬೆಳಗಾದರೆ ಇದೇ ಸಮೀಪದ ಕಾಲೇಜಿಗೆ ತೆರಳಬೇಕು ಇದರಿಂದ ಅಪಾಯವಿದೆ ಎಂಬುದು ಗೊತ್ತಿದ್ದರು ಇದಕ್ಕೆ ಸಂಬAದಿಸಿದ ಇಲಾಖೆ ಮಾತ್ರ ಕೈ ಕಟ್ಟಿ ಕುಳಿತಿದೆ, ಇನ್ನೂ ಕ್ಯಾರಿಯ ಸುತ್ತಲು ಬೆಲಿ, ಅಥವಾ ತಡೆಗೋಟೆ ನಿರ್ಮಿಸಿ ಮುಂದಿನ ಅಪಾಯ ತಪ್ಪಿಸಲು ಸಂಬAಸಿದಿ ಇಲಾಖೆಗೆ ಸ್ಥಳೀಯ ಶಾಸಕರು ಗಮನಹರಿಸುವರೇ ಕಾದು ನೋಡಬೇಕಿದೆ.