ಚಳ್ಳಕೆರೆ : ಕರ್ನಾಟಕ ರಾಜ್ಯ ಸರ್ಕಾರವು ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆAದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.
ಶ್ರೀ ಮುರುಘಾಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಮಠಾಧೀಶರ ಸಮಾಗಮ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಮಠಗಳನ್ನು ನಿಯಂತ್ರಿಸಲು ಆಡಳಿತಾಧಿಕಾರಿ ನೇಮಕ ಮಾಡಿದ್ದು ಇದು ಮಠಗಳ ಸ್ವಾತಂತ್ರ‍್ಯವನ್ನು ಕಿತ್ತುಕೊಂಡಿದೆ. ಆಡಳಿತಾಧಿಕಾರಿ ನೇಮಕ ಮಾಡಲು ಸಂಸ್ಥೆಯಲ್ಲಿ ನೌಕರರ ಸಮಸ್ಯೆಗಳಿದ್ದಾಗ ಮಾತ್ರ ಅವಕಾಶವಿರುತ್ತದೆ. ಆದರೆ ಇಲ್ಲಿ ಯಾವ ನೌಕರರು ಸಹ ಸಂಬಳವಾಗಿಲ್ಲ ಎಂಬ ಸಮಸ್ಯೆ ತಂದು ಬೀದಿಗೆ ಬಂದಿಲ್ಲ. ಶ್ರೀಮಠದಲ್ಲಿ ಎಂದಿನAತೆ ಪ್ರತಿದಿನ ಬಂದ ಭಕ್ತಾದಿಗಳಿಗೆ ಅನ್ನದಾಸೋಹ, ಮಠದ ಅಭಿವೃದ್ಧಿ ಕಾರ್ಯಗಳು, ಬಸವಪುತ್ಥಳಿ ಮತ್ತು ಇತರೆ ಕಟ್ಟಡ ನಿರ್ಮಾಣ ಕಾರ್ಯಗಳು ಎಂದಿನAತೆ ಪ್ರಗತಿಯಲ್ಲಿವೆ. ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಮುರುಘಾ ಶರಣರು ಜಿಪಿಎ ನೀಡಿರುತ್ತಾರೆ. ಜಿಪಿಎ ಹೊಂದಿರುವ ಕರ‍್ಯದರ್ಶಿ ಮತ್ತು ಸ್ವಾಮಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಸಹ ರಾಜ್ಯಸರ್ಕಾರ ಏಕಾಏಕಿ ಕೆಲವರ ಒತ್ತಡಕ್ಕೊಳಗಾಗಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಲಿಂಗಾಯತ ಸಮಾಜಕ್ಕೆ ಇಲ್ಲವೆಂಬ ತಪ್ಪು ಸಂದೇಶ ರವಾನೆಯಾದಂತಾಗಿದೆ. ಐದಾರು ವರ್ಷಗಳ ಹಿಂದೆ ರಾಮಚಂದ್ರಪುರ ಮಠದ ಪ್ರಕರಣದಲ್ಲಿ ಪರ-ವಿರೋಧದ ಎರಡು ಗುಂಪುಗಳಿದ್ದಾಗ ಅಂದು ರಾಜ್ಯಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಲಿಲ್ಲ. ಆದರೆ ಈಗ ಆಡಳಿತಾಧಿಕಾರಿ ನೇಮಿಸಿರುವುದು ದುರದೃಷ್ಟಕರ. ಕೂಡಲೇ ಸರ್ಕಾರ ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಮತ್ತು ಆದೇಶವನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು. ಶ್ರೀಮಠದ ಇಂದಿನ ಪರಿಸ್ಥಿತಿಗೆ ಹಿತಶತ್ರುಗಳೇ ಕಾರಣರಾಗಿದ್ದಾರೆ.
ಗೋಕಾಕ್‌ನ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ನಾಡಿನ ಮಠಾಧಿಪತಿಗಳೆಲ್ಲರು ಒಂದಾಗಿ ಮಠ-ಮಾನ್ಯಗಳ ಉಳವಿಗಾಗಿ ಹೋರಾಡುವ ಕಾಲ ಬಂದಿದೆ. ಮುರುಘಾಮಠದ ಉಳವಿಗಾಗಿ ಪ್ರಾಣ ಕೊಡಲು ನಾವು ಸಿದ್ಧರಿz್ದೆÃವೆ. ಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದುದಿನ ಧರಣಿಯನ್ನು ಸಾಂಕೇತಿಕವಾಗಿ ಮಾಡೋಣ. ಎಲ್ಲಾ ಮಠಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹೇಳಿದರು.
ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಶ್ರೀಮುರುಘಾಮಠಕ್ಕೆ ಕರ್ನಾಟಕದಲ್ಲಿ ತನ್ನದೇ ಆದ ಭವ್ಯ ಪರಂಪರೆ, ಇತಿಹಾಸವಿದೆ. ಕೆಲವರ ಪಿತೂರಿಯಿಂದ ಶ್ರೀಮಠದ ಪೂಜ್ಯರಿಗೆ ಗ್ರಹಣದ ಕಾಲ ಬಂದಿದ್ದು, ಕೆಲವೇ ದಿನಗಳಲ್ಲಿ ನಿವಾರಣೆಯಾಗಲಿದೆ. ಅದಕ್ಕೆ ಕರ್ತೃಮುರುಘೇಶನ ಕೃಪೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಲಸೂರಿನ ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿ, ನಾಡಿಗೆ ಮಠ-ಮಾನ್ಯಗಳ ಕೊಡುಗೆ ಅಪಾರವಾದುದು. ಸರ್ಕಾರ ಮಠಗಳ ನಿಯಂತ್ರಣ ಮಾಡಲು ಹೊರಟಿರುವುದು ಖಂಡನೀಯ. ಇಂದು ಮುರುಘಾಮಠ ನಾಳೆ ಮತ್ತೊಂದು ಮಠಕ್ಕೆ ಇಂತಹ ದುಸ್ಥಿತಿ ಬರದಂತೆ ಎಚ್ಚೆತ್ತುಕೊಳ್ಳಬೇಕಿದೆ. ಮಠಾಧಿಪತಿಗಳು ಒಂದಾಗಿ ಹೋರಾಟ ಮಾಡುವ ಕಾಲ ಬಂದಿದೆ ಎಂದು ನುಡಿದರು.
ಸಂಡೂರು ಶ್ರೀ ಪ್ರಭುಸ್ವಾಮಿಗಳು ಮಾತನಾಡಿ, ಯಾರು ವೈಚಾರಿಕವಾಗಿ ಕೆಲಸ ಮಾಡುತ್ತಾರೋ ಅಂಥವರಿಗೆ ಈ ಸಮಾಜ ಹಲ್ಲೆ, ಪಿತೂರಿ ಮಾಡುತ್ತ ಬಂದಿದೆ. ಅದಕ್ಕೆ ಸಾಕ್ಷಿಯಾಗಿ ಎಂ.ಎA. ಕಲಬುರ್ಗಿ ಹತ್ಯೆ, ಈಗ ಮುರುಘಾ ಶರಣರಿಗೆ ಸಂಕಷ್ಟ ಬಂದೊದಗಿದೆ. ಬಸವತತ್ತ್ವ, ವೈಚಾರಿಕತೆ ಮತ್ತು ಸಮಾನತೆ ಪರವಾಗಿ ಇರುವವರಿಗೆ ತೊಂದರೆ ತಪ್ಪಿದ್ದಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದರು.
ಸಭೆಯಲ್ಲಿ ಅಥಣಿಯ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ನಮ್ಮ ಗುರುಗಳಾದ ಮುರುಘಾಶರಣರಿಗೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಸಲಾಗಿದೆ. ಈಗ ಒಂದೊAದೇ ಸತ್ಯ ಬಯಲಾಗುತ್ತಿವೆ. ಇದನ್ನು ಕೆಲವರು ಸಹಿಸಲಾರದೆ ಆಡಳಿತಾಧಿಕಾರಿ ಹಾಕುವ ಪ್ರಯತ್ನ ನಡೆಸಿ ಮಠಗಳ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದರು.
ಸಭೆಯಲ್ಲಿ ಶಿಗ್ಗಾವಿಯ ಶ್ರೀ ಸಂಗನಬಸವ ಸ್ವಾಮಿಗಳು, ಸತ್ತಿಯ ಶ್ರೀ ಬಸವಲಿಂಗ ಸ್ವಾಮಿಗಳು, ಹಾವೇರಿಯ ಶ್ರೀ ಬಸವಶಾಂತಲಿAಗ ಸ್ವಾಮಿಗಳು, ತಂಗಡಗಿಯ ಶ್ರೀ ಬಸವಪ್ರಿಯ ಅಪ್ಪಣ್ಣ ಸ್ವಾಮಿಗಳು, ಶ್ರೀ ಬಸವ ಹರಳಯ್ಯ ಸ್ವಾಮಿಗಳು, ಶ್ರೀ ಕುಂಬಾರ ಗುಂಡಯ್ಯ ಸ್ವಾಮಿಗಳು, ಶಿರಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಬೆಂಗಳೂರಿನ ಶ್ರೀ ಬಸವ ರಮಾನಂದ ಸ್ವಾಮಿಗಳು, ತುಮಕೂರಿನ ಶ್ರೀ ಮಹಾಲಿಂಗ ಸ್ವಾಮಿಗಳು, ಕಲಬುರ್ಗಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಜನವಾಡ, ಶ್ರೀ ಬಸವಭೂಷಣ ಸ್ವಾಮಿಗಳು ಸಿರಗುಪ್ಪ, ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು ಮೈಸೂರು, ಶ್ರೀ ತಿಪ್ಪೇರುದ್ರಸ್ವಾಮಿಗಳು ತುಮಕೂರು, ಮನಗೂಳಿಯ ಶ್ರೀ ವೀರೇಶಾನಂದ ಸ್ವಾಮಿಗಳು, ಉಪ್ಪುಣಸಿಯ ಶ್ರೀ ಜಯಬಸವ ಸ್ವಾಮಿಗಳು, ಐರಣಿಯ ಶ್ರೀ ಗಜದಂಡ ಸ್ವಾಮಿಗಳು, ಮಾತೆ ಮುಕ್ತಾಯಕ್ಕ, ಮಾತೆ ಅಕ್ಕನಾಗಮ್ಮ, ನಿಪ್ಪಾಣಿಯ ಶ್ರೀ ಬಸವಮಲ್ಲಿಕಾರ್ಜುನ ಸ್ವಾಮಿಗಳು, ಸೋಮವಾರಪೇಟೆಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಠಾಧೀಶರುಗಳು ಭಾಗವಹಿಸಿದ್ದರು.
ಸಭೆಯಲ್ಲಿ, 1) ರಾಜ್ಯಸರ್ಕಾರ ಶೀಘ್ರವೇ ಆಡಳಿತಾಧಿಕಾರಿಯನ್ನು ರದ್ದು ಮಾಡಬೇಕು. 2) ಆಡಳಿತಾಧಿಕಾರಿ ನೇಮಕ ಖಂಡಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಛೇರಿ ಎದುರು ದಿನಾಂಕ 26-12-2022ರಂದು ಒಂದು ದಿನದ ಸಾಂಕೇತಿಕ ಧರಣಿ ಮಾಡುವುದು. 3) ಆಡಳಿತಾಧಿಕಾರಿ ನೇಮಕ ಆದೇಶ ವಾಪಾಸು ಪಡೆಯದೇ ಇದ್ದಲ್ಲಿ ನಾಡಿನ ಎಲ್ಲಾ ಮಠಾಧಿಪತಿಗಳು ಒಂದಾಗಿ ಹೋರಾಟ ಮಾಡುವುದು. 4) ಮುರುಘಾ ಶರಣರ ಸಂಕಷ್ಟದಲ್ಲಿ ನಾಡಿನ ಮಠಾಧಿಪತಿಗಳು ಎಲ್ಲಾ ಒಂದಾಗಿ ಇರಬೇಕೆಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನಂತರ, ಎಲ್ಲಾ ಮಠಾಧೀಶರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಆಡಳಿತಾಧಿಕಾರಿ ನೇಮಕವನ್ನು ಕೂಡಲೇ ಹಿಂತೆಗೆದುಕೊಳ್ಳುವAತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.

About The Author

Namma Challakere Local News
error: Content is protected !!