ಚಳ್ಳಕೆರೆ : ನಕಲಿ ದಾಖಲೆ ಸೃಷ್ಟಿಸಿ ಅನುಕಂಪ ಆಧಾರಿತ ನೌಕರಿ ಪಡೆಯಲು ಹೋಗಿ ಇಂದು ಪೊಲೀಸರ ಅತಿಥಿಯಾಗಿದ್ದಾರೆ.
ಇನ್ನೂ ಈ ಪ್ರಕರಣಕ್ಕೆ ಸಹಕರಿಸಿದ ಆರೋಪಿಗಳ ಬಂಧನವು ಕೂಡ ಮಾಡಿದೆ.
ಹೌದು ಚಿತ್ರದುರ್ಗ ನಗರ ವಾಸಿಯಾದ ಫೈಜಾನ್ ಮುಜಾಹಿದ್.ಸಿ.ಕೆ ಎಂಬ ವ್ಯಕ್ತಿಯು ಬೆಸ್ಕಾ ಇಲಾಖೆಯಲ್ಲಿ ತನ್ನ ಅಣ್ಣನಾದ ಮಹಮದ್ ಷೇಕ್.ಸಿ.ಕೆ ಸಹಾಯಕ ಮಾರ್ಗದಾಳು ಆಗಿ ಕೆಲಸ ಮಾಡಿಕೊಂಡಿದ್ದು ಮಹಮದ್ ಷೇಕ್.ಸಿ.ಕೆ ಮೃತಪಟ್ಟಿದ್ದಾನೆ ಇದರ ಅನ್ವಯ ಅನುಕಂಪದ ಆಧಾರದ ಮೇಲೆ ತನ್ನನ್ನು ನೇಮಕಾತಿ ಮಾಡಿಕೊಳ್ಳಲು ಕೋರಿ ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲನೆ ವೇಳೆ ತಗಲಾಕಿಕೊಂಡಿದ್ದಾನೆ.
ಇನ್ನೂ ನಕಲಿ ದಾಖಲೆಗಳನ್ನು ಸೃಷ್ಠಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವ ಈ ಆಸಾಮಿ ಇಂದು ಪೊಲೀಸರ ಅತಿಥಿಯಾಗಿದ್ದಾನೆ.
ನಕಲಿ ದಾಖಲೆಗಳು ಎಂದು ಗೊತ್ತಾಗುತಿದಂತೆ ಅಧಿಕಾರಿಗಳ ಪರೀಶಿಲನೆ ತಂಡ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಿ ಕ್ರೀಮಿನಲ್ ಪ್ರಕರಣಕ್ಕೆ ದೂರು ನೀಡಿದ್ದಾರೆ.
ಇನ್ನೂ ಈ ಪ್ರಕರಣದ ತನಿಖೆ ಕೈಗೊಂಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರಶುರಾಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ, ಮತ್ತು ಚಿತ್ರದುರ್ಗ ನಗರ ಉಪವಿಭಾಗದ ಡಿವೈ.ಎಸ್.ಪಿ ಹೆಚ್.ಆರ್.ಅನಿಲ್‌ಕುಮಾರ್, ಡಿ.ಸಿ.ಆರ್.ಬಿ ಡಿವೈ.ಎಎಸ್. ಲೋಕೇಶಪ್ಪ ರವರ ಮಾರ್ಗದರ್ಶನದಲ್ಲಿ ಕೋಟೆ ಪೊಲೀಸ್ ಠಾಣೆಯ ಪಿ.ಐ ರಮೇಶ್‌ರಾವ್ ಎಂ.ಎಸ್, ಪಿಎಸ್‌ಐ. ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಸಿಬ್ಬಂದಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದು,್ದ ಸದರಿ ತಂಡದವರು ತನಿಖೆಯ ಸಮಯದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ.

ಆರೋಪಿಗಳಾದ ಫೈಜಾನ್ ಮುಜಾಹಿದ್, ಎನ್.ರವಿ.ಸಹಾಯಕ, ಹೆಚ್.ಸಿ.ಪ್ರೇಮ್‌ಕುಮಾರ್, ಎಸ್.ಟಿ.ಶಾಂತಮಲ್ಲಪ್ಪ, ವಿ.ವಿರೇಶ್, ರಘುಕಿರಣ್.ಸಿ., ಹರೀಶ್, ಶಿವಪ್ರಸಾದ್, ಜೆ.ರಕ್ಷಿತ್, ಓ.ಕಾರ್ತಿಕ್ ಇವರ ಮೇಲೆ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!