ಚಳ್ಳಕೆರೆ : ಸರ್ಕಾರಿ ಸ್ವಾಮ್ಯದ ಗ್ರಾಹಕರ ಸೇವ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವಂತಹ ಸೌಲಭ್ಯಗಳು ಪಾರದರ್ಶಕವಾಗಿ ಯಾವುದೇ ದೂರುಗಳು ಬಾರದಂತೆ ಮತ್ತು ಯಾವುದೇ ಅವ್ಯವಹಾರಗಳಿಗೆ ಎಡೆ ಮಾಡಿದಂತೆ ಕಾರ್ಯನಿರ್ವಹಿಸಬೇಕೆಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ಚಳ್ಳಕೆರೆ ಮುಖ್ಯ ರಸ್ತೆಯಲ್ಲಿ ಕುಮಾರ್ ನಾಗರಿಕ ಸೇವಾ ಕೇಂದ್ರದ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು ಸರ್ಕಾರದಿಂದ ಕೊಡ ಮಾಡುತ್ತಿರುವಂತಹ ಈ ಸೌಲಭ್ಯಗಳು ಸಾರ್ವಜನಿಕರಿಗೆ ಸಹಾಯವಾಗಬೇಕು ಮತ್ತು ಸಮಾಜದಲ್ಲಿ ವಿಶ್ವಾಸಗಳಿಸಬೇಕು ಶೋಷಿತರು ದುರ್ಬಲರು ಮತ್ತು ಅಸಹಾಯಕರು ಪರಿತಪಿಸುವಂತಾಗಬಾರದು ನೀವು ನೀಡುತ್ತಿರುವಂತಹ ಈ ಸೌಲಭ್ಯಗಳು ಇಂತಹ ವರ್ಗದವರಿಗೆ ಊರುಗೋಲಾಗಬೇಕು ನಿಮ್ಮ ಜೀವನ ನಿರ್ವಹಣೆಯೂ ಸೇರಿದಂತೆ ಸಮಾಜದಲ್ಲಿರುವಂತಹ ಎಂತಹ ಜನರಿಗೆ ಅಲ್ಪ ಭಾಗಂಶ ಮೀಸಲಿರಿಸಬೇಕು,
ಇಂತಹ ಸೇವ ಕೇಂದ್ರಗಳಲ್ಲಿ ಕಳೆದ ದಿನಗಳಲ್ಲಿ ನಡೆದ ವೋಟರ್ ಐಡಿ ಕಾರ್ಡ್ ನಕಲು ಪ್ರಕರಣ ನಮ್ಮ ಮುಂದಿದೆ ಇಂತಹ ಯಾವುದೇ ಕೃತ್ಯಗಳು ಇಂತಹ ಕೇಂದ್ರಗಳಿAದ ನಡೆಯಬಾರದು ಜೀವನ ನಿರ್ವಹಣೆ ಶ್ರಮದಿಂದ ಮತ್ತು ಕರ್ತವ್ಯ ಪ್ರಜ್ಞೆಯಿಂದ ಆಗಬೇಕು ಯಾವುದೇ ಅನ್ಯ ಮಾರ್ಗದಿಂದ ನಡೆಯ ಕೂಡದು ಈ ದೇಶದ ಕಾನೂನು ಮತ್ತು ನಿಯಮಾವಳಿಗಳನ್ನು ನಾವು ಪರಿಪಾಲಿಸಬೇಕು ಸಂವಿಧಾನದ ಆಶಯ ಕೂಡ ಇದೇ ಆಗಿದೆ.
ಹಾಗಾಗಿ ಇವತ್ತು ಆರಂಭವಾಗುತ್ತಿರುವ ಈ ಕೇಂದ್ರ ತಾಲೂಕಿನಲ್ಲಿ ಮಾದರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಗಡಿ ಮಾಲೀಕರಾದಂತ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು