ಚಳ್ಳಕೆರೆ : ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಹಿರೇ ಕೆರೆಯಲ್ಲಿ ಕುಟುಂಬದ ಮೂರು ಜನ ಮುಳುಗಿ ಸಾವಿನಪ್ಪಿರುವ ಘಟನೆ ಗಂಟೆ ಗಂಟೆಗೂ ತಿರುವು ಪಡೆದುಕೊಳ್ಳುತ್ತಿದೆ, ಇನ್ನೂ ಬೆಳ್ಳಿಗ್ಗೆ ಗಂಡ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ ಕುಟುಂಬ ನೀರಿನಲ್ಲಿ ಅನುಮಾನಸ್ಪಾದವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಎಂಬ ಸುದ್ದಿ ಹೊರ ಬಿದ್ದ ಹಿನ್ನೆಲೆಯಲ್ಲಿ ಮದ್ಯಾಹ್ನ ವೇಳೆಗೆ ಗಂಡನ ಮೇಲೆ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರ ಆರೋಪದ ಮೆರೆಗೆ ಪೊಲೀಸ್‌ರು ಗಂಡ ಮಲ್ಲಿಕಾರ್ಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಇನ್ನೂ ಸಂಜೆ ನಾಲ್ಕರ ಸುಮಾರಿಗೆ ಹೆಂಡತಿ ದುರುಗಮ್ಮ(25), ಮೃತ ದೇಹ ಮಾತ್ರ ಪತ್ತೆಯಾಗಿದೆ ಇನ್ನೂ ಇಬ್ಬರು ಮಕ್ಕಳಾದ ಅಜ್ಜಯ್ಯ(6) ಸೇವಂತಿ(4) ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಹಿರೆಹಳ್ಳಿ ಗ್ರಾಮದವರಾದ ಇವರು ಬೋಸೆದೇವರಹಟ್ಟಿ ಗ್ರಾಮಕ್ಕೆ ಸಂಬAಧಿಕರ ಮನೆಗೆ ಬಂದಿದ್ದರು ಎನ್ನಲಾಗಿದ್ದು ಶುಕ್ರವಾರ ಬೆಳಗ್ಗೆ 12-30 ರಮಯದಲ್ಲಿ ಕೆರೆ ನೋಡಲು ತಾಯಿ ಮಕ್ಕಳೊಂದಿಗೆ ಕೆರೆಬಳಿ ಬಂದಿದ್ದು ಕೆರೆಯಲ್ಲಿ ತಾಯಿಯೊಂದಿಗೆ ಇಬ್ಬರು ಮಕ್ಕಳು ಕೆರೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿರುವ ಘಟನೆ ನಾಯಕನಹಟ್ಟಿ ಪೋಲಿಸ್ ಠಾಣಾ ವ್ಯಾಪ್ತಿಗೆ ಸೆರಿದ್ದಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮುಳಗು ತಜ್ಞರೊಂದಿಗೆ ಶೋಧ ಕಾರ್ಯ ಮುಂದುವರೆದಿದೆ.
ಪೊಲೀಸರ ತನಿಖೆಯ ನಂತರವೇ ಮೂರು ಜನರ ಸಾವಿನ ರಹಸ್ಯ ಬಯಲಾಗಲಿದೆ.
ಕೆರೆಯ ದಡದಲ್ಲಿ ಮೃತ ಕುಟುಂಬಸ್ಥರ ರೋದನ ಮುಗಿಲು ಮುಟ್ಟುವಂತಿದೆ. ಸುತ್ತ ಮುತ್ತಲ ಗ್ರಾಮಸ್ಥರು ಕೆರೆಯ ಬಳಿ ಘಟನೆ ನೋಡಲು ತಂಡೋಪ ತಂಡವಾಗಿ ಬರುತ್ತಿರುವ ದೃಶ್ಯ ಕಂಡು ಬಂತು.
ಇನ್ನೂ ಮೊಳಕಾಲ್ಮೂರು ಕಾಂಗ್ರೇಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು, ಇತರರ ಜನಪ್ರತಿನಿಗಳು ಸ್ಥಳದಲ್ಲಿ ಇದ್ದರು.