ಚಳ್ಳಕೆರೆ : ಸ್ಥಳೀಯ ಇತಿಹಾಸ ಉಳಿಯಬೇಕೆಂದರೆ ಸ್ಥಳೀಯ ಶಾಸನಗಳು ಉಳಿಯಬೇಕು, ಒಂದು ವೀರಗಲ್ಲಿನ ಶಾಸನದಲ್ಲಿ ಒಬ್ಬ ವೀರನು ಕುದುರೆ ಸವಾರಿ ಮಾಡುತ್ತಿರುವುದು ದೊಡ್ಡದಾಗಿ ಚಿತ್ರಿಸಲಾಗಿದೆ ಆದ್ದರಿಂದ ಇಂತಹ ಶಾಸನವನ್ನು ಉಳಿಸಬೇಕು ಎಂದು ಮುಖ್ಯ ಶಿಕ್ಷಕರಾದ ಗೌರೀಶ್ ಹೇಳಿದ್ದಾರೆ.
ಅವರು ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಜ್ಞಾನ ಗಂಗೋತ್ರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹೊರಸಂಚಾರದ ಹೋದ ಸಂದರ್ಭದಲ್ಲಿ ದೊಡ್ಡ ಉಳ್ಳಾರ್ತಿ ಗ್ರಾಮದ ಕೆರೆ ಕೋಡಿಯಲ್ಲಿ ಇರುವ “”ಪ್ರಾಚೀನ ವೀರಗಲ್ಲು ಶಾಸನಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪರಿಚಯಿಸಿದರು.
ಕಲ್ಲಿನ ಶಾಸನದಲ್ಲಿ ಕುದುರೆಯು ಶತ್ರು ಸೈನ್ಯದ ಆನೆಗಳನ್ನು ಓಡಿಸುತ್ತಿರುವಂತೆ ಮತ್ತು ಆನೆಗಳನ್ನು ಕೆಡಿವಿದಂತೆ ಹಾಗೂ ತುಳಿಯುತ್ತಿರುವಂತೆ ಚಿತ್ರಸಲಾಗಿದೆ. ಆನೆಗಳ ಮೇಲೆ ಸೈನಿಕರು ರಣರಂಗಕ್ಕೆ ಹೊರಟವರಂತೆ ಕಾಣುತ್ತದೆ ಇನ್ನೊಂದು ಶಾಸನದಲ್ಲಿ ಮಾಡಿದ ವೀರನನ್ನು ಹಿಡಿದು ಹಾರುತ್ತಿರುವ ಚಿತ್ರಿಸಲಾಗಿದೆ.
ಈ ಶಾಸನಗಳು ನೊಳಂಬರ ಕಾಲದ ಕ್ರಿಸ್ತಶಕ 925ರಲ್ಲಿ ಶಾಸನಗಳು ಮತ್ತು ಕೆಲವು ಶಾಸನಗಳು 10ನೇ ಶತಮಾನದ ಶಾಸನಗಳಾಗಿವೆ. ಈ ಎಲ್ಲಾ ಶಾಸನಗಳ ಬಗ್ಗೆ ವಿವರಿಸಿದ್ದರು.

ಈ ಶಾಸನಗಳನ್ನು ಸಂರಕ್ಷಣೆ ಸಂಬAಧಿಸಿದ ಪ್ರಾಚ್ಯವಸ್ತು ಇಲಾಖೆಯವರು ಸಂರಕ್ಷಣೆ ಮಾಡಬೇಕೆಂದು ಈದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು..
ಸಹಶಿಕ್ಷಕರಾದ ಜಿಎಚ್.ಶೋಭಾ, ಆಶಾಕುಮಾರಿ ಟಿ, ಗಾಯತ್ರಿ ಎಸ್, ಕವಿತ ಟಿ, ಕಾರ್ಯದರ್ಶಿಯಾದ ಈ ಎನ್ ತಿಪ್ಪೇಸ್ವಾಮಿ ಅಧ್ಯಕ್ಷರಾದ ರಘುನಂದ ಜೆ ಇದ್ದರು….

About The Author

Namma Challakere Local News
error: Content is protected !!