ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಬಸ್ ಇಲ್ಲದೆ ಶಾಲಾ ಕಾಲೇಜಿಗೆ ಹೋಗಲು ತುಂಬಾ ತೊದರೆಯಾಗುತ್ತದೆ ಎಂದು ಅಳಲು ತೋಡಿಕೊಂಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಮರುಗಿದ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ ಇಂದು ಮುಂಜಾನೇಯೆ ಸಾರಿಗೆ ಡಿಪೋ ಬಳಿ ತೆರಳಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಕಲ್ಪಿಸುವಂತೆ ಸೂಚನೆ ನೀಡಿ ತಾವೇ ಕುದ್ದಾಗಿ ವಿದ್ಯಾರ್ಥಿಗಳು ಕಾಲೇಜ್‌ಗೆ ತೆರಳಲು ನೆರವಾಗಿದ್ದಾರೆ,

ಹೌದು ನಿಜಕ್ಕೂ ಹೆಮ್ಮೆಯ ವಿಷಯ ಸಮಸ್ಯೆ ಕುರಿತು ಮನವಿ ನೀಡಿ ತಿಂಗಳಾದರೂ ಕ್ಯಾರೆ ಎನ್ನದ ಇಂದಿನ ದಿನಮಾನಗಳಲ್ಲಿ ಮೌಖಿಕವಾಗಿ ದೂರವಾಣಿ ಮೂಲಕ ವಿದ್ಯಾರ್ಥಿಗಳ ಗೋಳು ಹಾಲಿಸಿದ ತಹಶೀಲ್ದಾರ್ ಮರುದಿನವೇ ಸ್ಥಳಕ್ಕೆ ಆಗಮಿಸಿ ಸಾರಿಗೆಯಿಂದ ಹಾಗುವ ಸಮಸ್ಯೆಯನ್ನು ಸರಿಪಡಿಸಿ ಸಕಾಲಕ್ಕೆ ಸಾರಿಗೆ ವ್ಯವಸ್ಥೆ ಎಂಬ ಅರ್ಥದಲ್ಲಿ ಸಾರಿಗೆ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು ವಾಹನ ಚಾಲಕರಿಗೆ ವಿದ್ಯಾರ್ಥಿಗಳ ಬಗ್ಗೆ ಕನಿಕರ ತೋರುವ ಮನಸ್ಥಿತಿ ಇರಬೇಕು ಎಂದು ಸೂಚಿಸಿದರು.
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾದ್ಯಮದೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ವ್ಯಾಸಂಗ ಮಾಡಲು ನಗರ ಪ್ರದೇಶಕ್ಕೆ ಬಂದ ಅತೀ ಕಡುಬಡತನದ ಮಕ್ಕಳು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಪಡೆಯುತ್ತಿದ್ದಾರೆ.
ನಗರದ ಹೊರವಲಯದ ವಿದ್ಯಾರ್ಥಿನಿಲಯದಿಂದ ಸುಮಾರು 6ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದಿನನಿತ್ಯ ಓಡಾಟ ನಡೆಸಬೇಕು ಆದರೆ ಸಾರಿಗೆ ವ್ಯವಸ್ಥೆ ಪಕ್ಕದಲ್ಲಿ ಇದ್ದರು ಕೂಡ ಅದು ಕೈಗೆ ಎಟುಕಾದಗಿದೆ ಎಂದು, ಮಕ್ಕಳು ಅಳಲು ತೊಡಿಕೊಂಡಿದ್ದರಿAದ ಇಂದು ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದೆ ಎಂದಿದ್ದಾರೆ.

Namma Challakere Local News

You missed

error: Content is protected !!