ಚಳ್ಳಕೆರೆ: ರೈತರು ಜಾನುವಾರುಗಳನ್ನು ಮಾರಾಟ ಮಾಡದೆ ಪುಣ್ಯ ಕೋಟಿ ಸರ್ಕಾರಿ ಗೋಶಾಲೆ ಬಿಟ್ಟರೆ ಸಂಪೂರ್ಣವಾಗಿ ಸರಕಾರ ರಕ್ಷಣೆ ಮಾಡುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಸಮೀಪ 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪುಣ್ಯಕೋಟಿ ಸರ್ಕಾರಿ ಗೋಶಾಲೆ ಉದ್ಘಾಟಿಸಿ ಮಾತನಾಡಿದರು. ರೈತರು ಜೀವನಾಡಿಯಾದ ಜಾನವಾರುಗಳಿಗೆ ವಯಸ್ಸಾದ ಮೇಲೆ ಖಸಾಯಿ ಖಾನೆಗೆ ನೀಡುವುದನ್ನು ಬಿಟ್ಟು ಪುಣ್ಯಕೋಟಿ ಸರ್ಕಾರಿ ಗೋಶಾಲೆಗೆ ಬಿಟ್ಟರೆ ಜಾನುವಾರುಗಳನ್ನು ಪೋಷಣೆ ಮಾಡುತ್ತಾರೆ.
ರೈತರಿಗೆ ಜಾನುವಾರುಗಳ ಅವಶ್ಯಕವಾಗಿದ್ದರು, ಆರ್ಥಿಕ ಸಂಕಷ್ಟದಿAದ ನಿರ್ವಹಣೆ ಮಾಡಲಾಗದೆ ಮಾರಾಟ ಮಾಡುತ್ತಾರೆ. ಇನ್ನು ವಯಸ್ಸಾದ ಜಾನುವಾರುಗಳನ್ನು ಕಟುಕರಿಗೆ ನೀಡುತ್ತಾರೆ. ರೈತರು ಜಾನುವಾರುಗಳನ್ನು ಮಾರಾಟ ಮಾಡದೆ ಪುಣ್ಯ ಕೋಟಿ ಸರ್ಕಾರಿ ಗೋಶಾಲೆ ಬಿಟ್ಟರೆ ರಕ್ಷಣೆ ಮಾಡುತ್ತಾರೆ. ಜಾನುವಾರುಗಳಿಗೆ ಮೇವು-ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಶು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಪುಣ್ಯಕೋಟಿ ಸರ್ಕಾರಿ ಗೋಶಾಲೆ ನಿರ್ವಹಣೆಗೆ ಸರ್ಕಾರಿ ಅಧಿಕಾರಿಗಳ ವೇತನವನ್ನು ನೀಡಿದ್ದಾರೆ. ಪುಣ್ಯಕೋಟಿ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ವಾರ್ಷಿಕವಾಗಿ 11 ಸಾವಿರ ಪಾವತಿಸುವ ಮೂಲಕ ಹಸುಗಳನ್ನು ದತ್ತು ಪಡೆಯುವ ಗುರಿ ಹೊಂದಿದೆ ಎಂದು ಹೇಳಿದರು.
ಪಶು ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ ಪುಣ್ಯ ಕೋಟಿ ಸರ್ಕಾರಿ ಗೋಶಾಲೆಯನ್ನು 9 ಎಕರೆ 36 ಗುಂಟೆ ಪ್ರದೇಶದಲ್ಲಿ 1 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರೈತರು ಜಾನುವಾರುಗಳನ್ನು ವಯಸ್ಸಾದ ಮೇಲೆ ನಿರ್ವಹಣೆ ಮಾಡಲಾಗದ ವೇಳೆ ಪುಣ್ಯಕೋಟಿ ಸರ್ಕಾರಿಗೋಶಾಲೆಗೆ ಬಿಟ್ಟರೆ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ತಾಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ವೈದ್ಯಾಧಿಕಾರಿ ಶ್ರೀನಿವಾಸಬಾಬು ಜಿಲ್ಲಾ ಪಂಚಾಯಿತಿ ಎಇಇ ಕಾವ್ಯ, ಜಿಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್, ಮಂಜುನಾಥ, ತಿಪ್ಪೇಸ್ವಾಮಿ, ಶಿವಣ್ಣ, ಸೇರಿದಂತೆ ಮುಂತಾದವರು ಇದ್ದರು.