ಚಳ್ಳಕೆರೆ : ನಾಯಕನಹಟ್ಟಿ ಹಿರೆಕೆರೆಯಲ್ಲಿ ಒಂದೇ ಕುಟುಂಬದ ನಾಲ್ಕು ಜನರು ನೀರಿನಲ್ಲಿ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೆಕೆರೆ ನೋಡಲು ಹಿರೆಹಳ್ಳಿ ಗ್ರಾಮದ ಮಲ್ಲಿಕಾರ್ಜುನ (28) ಹೆಂಡತಿ ದುರುಗಮ್ಮ(26) ಮಕ್ಕಳಾದ ಅಜಯ್(6)ಸೇವಂತಿ(4) ಬೋಸಿದೇವರಹಟ್ಟಿ ಗ್ರಾಮದ ಸಂಬಂಧಿಕರ ಮನೆಗೆ ಬಂದು ನಾಯಕನಹಟ್ಟಿ ಹಿರೆಕೆರೆ ನೋಡಲು ಹೋದ ಸಂದರ್ಭದಲ್ಲಿ ಕೆರೆಯಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು. ಅಗನಿಶಾಮಕ ದಳದ ಸಿಂಬಂಧಿಗಳು ಬೇಟಿ ನೀಡಿ ಮೃತರ ಶೋದ ಕಾರ್ಯ ಮುಂದುವರೆದಿದ್ದು ಪೋಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಸುತ್ತಮುತ್ತಲ ಗ್ರಾಮಸ್ಥರು ವೀಕ್ಷಣೆ ಮಾಡಲು ಕೆರೆಯತ್ತ ದೌಡಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ ಇದು ನಾಯಕನಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು, ಇನ್ನು ಹೆಚ್ಚಿನ ಮಾಹಿತಿ ತನಿಖೆ ನಂತರ ಹೊರಬಿಳಲಿದೆ.