ಚಳ್ಳಕೆರೆ : ಸಾರ್ವಜನಿಕ ಆಸ್ವತ್ರೆಯಲ್ಲಿ ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ನೇತೃತ್ವದಲ್ಲಿ ರೋಗಿಗಳಿಗೆ ಬ್ರೇಡ್ ಹಣ್ಣು ವಿತರಿಸಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮಾತನಾಡಿ, ನಮ್ಮ ಪಕ್ಷದ ವರಿಷ್ಠರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನ್ಮ ದಿನಾಚರಣೆ ನಿಮ್ಮಿತ್ತ ಇಂದು ಮುಂಬರುವ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಂ.ರವೀಶ್‌ಕುಮಾರ್ ನೇತೃತ್ವದಲ್ಲಿ ಇಂದು ಕ್ಷೇತ್ರದಲ್ಲಿ 150 ಜನರಿಂದ ರಕ್ತದಾನ ಶಿಬಿರ, ಹಾಗು ಸಾರ್ವಜನಿಕ ಆಸ್ವತ್ರೆಯಲ್ಲಿ ರೋಗಿಗಳಿಗೆ ಹಣ್ಣು ಬ್ರೇಡ್ ವಿತರಣೆ ಹಾಗೂ ವೆಂಕಟೇಶ್ವರ ನಗರದ ಕಿವುಡು ಮೂಗ ಶಾಲೆಯಲ್ಲಿ ಬೆಡ್ ಶೀಟ್ ನೀಡುವ ಕಾರ್ಯಕ್ರಮದ ಮೂಲಕ ನಮ್ಮ ಕುಮಾರಣ್ಣನಿಗೆ ಶುಭಾಷಯ ಕೋರಿದ್ದೆವೆ, ಅದರಂತೆ ಮುಂದಿನ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಎಂ.ರವೀಶ್ ಅಭಿವೃದ್ದಿಗೆ ಕಂಕಣ ಬದ್ದರಾಗುತ್ತಾರೆ ಎಂದರು.
ಇನ್ನೂ ನಗರಸಭಾ ಸದಸ್ಯ ವಿ.ವೈ ಪ್ರಮೋದ್ ಮಾತನಾಡಿ, ಕಳೆದ 2018ರ ಚುನಾವಣೆ ಕೈ ತಪ್ಪಿದೆ ಆದರೆ 2023ರಲ್ಲಿ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ, ಈಗಾಗಲೇ ಸಂಘಟನೆಯಲ್ಲಿ ತೊಡಗಿದೆ, ಅದರಂತೆ ಈಡೀ ರಾಜ್ಯದಲ್ಲಿ ಎರಡು ರಾಷ್ಟಿçÃಯ ಪಕ್ಷಗಳನ್ನು ತೊರೆದು ನಮ್ಮ ಪ್ರಾದೇಶಿಕ ಪಕ್ಷಕ್ಕೆ ಜನರು ಒಲವು ತೋರುತ್ತಿದ್ದಾರೆ. ಬದಲಾವಣೆಯನ್ನು ಮತದಾರರು ಬಯಸುತ್ತಿದ್ದಾರೆ. ಅದರಂತೆ ಈಡೀ ಚಳ್ಳಕೆರೆ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಿಕ್ಕೆ ಬರುವುದನ್ನು ಜನರು ಕಾಯುತ್ತಿದ್ದಾರೆ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್, ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಸದಸ್ಯ ಎಸ್‌ಟಿ.ವಿಜಯ್, ಮುಖಂಡ ಭಿಮಣ್ಣ, ಗಾಡಿತಿಪ್ಪೆಸ್ವಾಮಿ, ಬಾಲೆನಹಳ್ಳಿ ಸಿದ್ದೇಶ್, ಸತೀಶ್, ಹನುಮಂತಚಾರ್, ಇಮಾಮ್, ಯೂನೀಸ್, ಸ್ವಾಲ್ವೆ, ರಾಜು, ಶ್ರೀಧರ್‌ಚಾರ್, ವೆಂಟಕೇಶ್‌ಬಿ.ಎಸ್.ಜಿ., ತಿಮ್ಮಪ್ಪ, ಗ್ರಾಪಂ.ಅಧ್ಯಕ್ಷ ಸೊಮಶೇಜರ್, ಆರ್.ಲೋಕೇಶ್ ಚನ್ನಪ್ಪ, ಶಿವಪ್ಪ, ದೊಡ್ಡೆರಿ ಶಿವಣ್ಣ, ವೆಂಟಕೇಶ್, ಬಾರ್‌ತಿಪ್ಪೆಶ್, ಗ್ರಾಪಂ. ಅಧ್ಯಕ್ಷ ಮೌರ್ಯ, ಸಂತೋಶ್, ರಾಮಣ್ಣ, ಪರುಶುರಾಂಪುರ ಲೋಕೇಶ್, ಚೌಳೂರ ವೀರಶ್, ಶ್ರೀನಿವಾಸ್, ಪೂರ್ಣಮುತ್ತಯ್ಯ, ತಿಪ್ಪೆಸ್ವಾಮಿ, ಪರುಶುರಾಂಪುರ ಶ್ರೀನಿವಾಸ್, ವಿನೋದ, ಪಾರ್ವತಮ್ಮ, ನಾಗಮಣಿ, ಮಂಜಮ್ಮ, ನೇತ್ರಾ, ಸುಜಾತಾ, ಶಕುಂತಲಾ, ಸುಧಾರಾಣಿ, ಇತರರು ಇದ್ದರು.