ನಾಡು ನುಡಿಯ ಸಂಸ್ಕೃತಿಗೆ ಚಳ್ಳಕೆರೆ ಹೆಸರುವಾಸಿ : ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿಕೆ
ಚಳ್ಳಕೆರೆ : ನಮ್ಮ ಪಂರAಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವಕರು ಕಂಕಣ ಬದ್ದರಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಚೌಳೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಇಂದಿನ ಆಧುನಿಕ ಕಾಲಗಟ್ಟದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರಾದಯಗಳು ನಶಿಸಿ ಅಳವಿನಂಚಿಗೆ ಹೋಗುತ್ತಿವೆ ಆದರೆ ನಾವು ಎಷ್ಟೆ ಪ್ರಬುದ್ದರಾದರೂ ನಮ್ಮ ನಾಡು ನುಡಿಯ ಸಂಸ್ಕೃತಿಗೆ ಬೆಲೆ ಕಟ್ಟಲಾಗದು ಆದ್ದರಿಂದ ನಮ್ಮ ಗ್ರಾಮದ ಆರಾಧ್ಯ ದೇವರುಗಳನ್ನು ನಾವು ನಮ್ಮ ಸಂಸ್ಕೃತಿಯನ್ನು ಉಳಿಸು ನಿಟ್ಟಿನಲ್ಲಿ ಸಾಗೋಣ ಎಂದಿದ್ದಾರೆ.