ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಮದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಸತಿ ಶಾಲೆಯಲ್ಲಿ ಹಾಸ್ಟೆಲ್ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರಿಂದ ಹಾಸ್ಟೆಲಿಗೆ ಸರಬರಾಜುರಾಗುತ್ತಿರುವ ಆಹಾರ ಪಡಿತರ ಮತ್ತು ಇನ್ನಿತರ ಸಾಮಾಗ್ರಿಗಳ ಸರಬರಾಜಾದ ಬಗ್ಗೆ ಯಾವುದೇ ವಹಿಗಳು ಅಥವಾ ದಾಖಲೆಗಳನ್ನು ನಿರ್ವಹಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬAದಿದೆ, ಇದಕ್ಕೆ ಸಂಬAಧಪಟ್ಟAತೆ ತಾಲೂಕು ಬಿಸಿಎಂ ಅಧಿಕಾರಿ, ಹಾಗೂ ಹಾಸ್ಟೆಲ್‌ನ ವಾರ್ಡನ್ ಮಾಹಿತಿ ನೀಡದೇ ಇರುವುದರಿಂದ ಗುತ್ತಿಗೆದಾರರು ಕಳೆದ ಒಂದು ವಾರದಿಂದ ಯಾವುದೇ ಆಹಾರ ಸಾಮಗ್ರಿ ನೀಡಿಲ್ಲದೆ ಇರುವುದು ಪರಿಶೀಲನೆಯಿಂದ ಕಂಡು ಬಂದಿದೆ.
ದಾಸ್ತಾನು ಕೊಠಡಿಯಲ್ಲಿ ಯಾವುದೇ ಸಾಮಗ್ರಿಗಳು ಇಲ್ಲದಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು. ಇದೇ ಸಂಧರ್ಭದಲ್ಲಿ ಪರಿ ಪೂರ್ಣವಾದ ಮಾಹಿತಿಯನ್ನು ನೀಡಲು ಹಾಸ್ಟೆಲ್ ಸಿಬ್ಬಂದಿಗಳು ತಡಕಾಡಿದರು ಹಾಗೂ ತರಕಾರಿಯನ್ನು ಕೂಡ ಹಾಸ್ಟೆಲ್ ಸಿಬ್ಬಂದಿಗಳೇ ಹೋಗಿ ಖರೀದಿ ಮಾಡುತ್ತಿರುವುದು ಕಂಡುಬAದಿರುವುದರಿAದ ಕಂಡು ಬಂದಿತು.
ಇದೇ ಸಮದಲ್ಲಿ ಗ್ರಾಮಸ್ಥರು ಕೂಡ ಲೋಪದೋಶಗಳ ಬಗ್ಗೆ ಬೇರೆ ಬೇರೆ 40 ಕಿಲೋಮೀಟರ್ ವ್ಯಾಪ್ತಿಯ ಊರುಗಳಿಂದ ಬರುವಂತಹ ಈ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಗುತ್ತಿಗೆದಾರರು ಹಾಗೂ ವಾರ್ಡ್ನ, ಬಿಸಿಎಂ ಅಧಿಕಾರಿಗಳ ಬೇಜಾವ್ದಾರಿಗೆ ಬಗ್ಗೆ ವಿಸ್ತೃತವಾದ ತನಿಕಾ ವರದಿಯನ್ನು ತಕ್ಷಣ ನೀಡುವಂತೆ ಸ್ಥಳದಲ್ಲೇ ಇದ್ದ ತಹಸೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಮೊಳಕಾಲ್ಮೂರು ರಾಜಾಸ್ವ ನಿರಿಕ್ಷಕರಾದಂತಹ ಪ್ರಾಣೇಶ್ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!