ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟಲಿಗೆ ದಿಡೀರ್ ಬೇಟಿನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಂತರ ಪ್ರಭಾರ ತಹಶಿಲ್ದಾರ್ ಎನ್.ರಘುಮೂರ್ತಿ ಅವರೊಂದಿಗೆ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಚರ್ಚಿಸಿದರು, ಜೊತಗೆ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸಂಬAಧಿಸಿದAತ ವಿಸ್ತೃತವಾಗಿ ಸಂವಾದವನ್ನು ಮಕ್ಕಳೊಟ್ಟಿಗೆ ನಡೆಸಿದರು,
ಗಣಿತ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆದರು ಮಂಕುತಿಮ್ಮನ ಕಗ್ಗ ಹೇಳುವುದರೊಂದಿಗೆ ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸಿದರು, ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಅಭಿರುಚಿಯ ಬಗ್ಗೆ ಮಾಹಿತಿ ಪಡೆದರು.
ಸ್ಥಳೀಯ ಪಿಡಿಒ ಹುದ್ದೆಯಿಂದ ಐಎಎಸ್, ಐಪಿಎಸ್ ಹುದ್ದೆ ಯವರೆಗಿನ ಮಕ್ಕಳ ಅಭಿಪ್ರಾಯವನ್ನು ಆಲಿಸಿದರು ಕೊನೆಗೆ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಪರಿಶ್ರಮ ಮುಖ್ಯವಾಗುತ್ತದೆ ಮತ್ತು ನಿರ್ದಿಷ್ಟ ಗುರಿ ಮುಖ್ಯವಾಗುತ್ತದೆ ಈ ಪ್ರೌಢಶಾಲಾ ಅಂತದಿAದಲೇ ಯೋಜನಾಬದ್ಧವಾದ ಗುರಿಯನ್ನು ಹೊಂದಿರಬೇಕು.
ಯಶಸ್ಸುಗಳಿಸಲು ಸಾಧ್ಯ ನಾವು ಪಡೆಯುವ ಪದವಿಗಳು ಮಾನದಂಡವಲ್ಲ ನಿಶ್ಚಿತವಾದ ಗುರಿ ಮತ್ತು ಪರಿಶ್ರಮವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹಾಗಾಗಿ ಪ್ರೌಢವಸ್ಥೆಯಿಂದ ಕಟಿ ಬದ್ಧರಾಗಿ ಪಠ್ಯದ ವಿಷಯಗಳನ್ನು ಮನನ ಮಾಡುವ ಪದ್ಯದ ವಿಷಯಗಳನ್ನು ಪಠಿಸುತ್ತ ಪುನರಾವರ್ತನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಮತ್ತು ವಸತಿ ಶಾಲೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು