ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿಯನ್ನು ಕಂದಾಯ ಇಲಾಖೆಯ ವಿಶೇಷ ಪರಿಕ್ಪಲನೆಯ ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಅಧಿಕಾರಿಗಳು ಕಂಕಣ ಬದ್ದರಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕು ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದ ಅವರು ಸಾರಿಗೆ ಸಚಿವರ ಆಸೆಯಂತೆ ಮತ್ತು ಸೂಚನೆಯಂತೆ ಸಮಸ್ಯೆ ಮುಕ್ತ ಗ್ರಾಮ ಮಾಡಬೇಕಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕೂಡ ಗಡಿ ಭಾಗದಲ್ಲಿರುವಂತಹ ಈ ಗ್ರಾಮವನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡುವಂತೆ ತಿಳಿಸಿದ್ದಾರೆ ಆದ್ದರಿಂದ ಈ ಪಂಚಾಯಿತಿಯ ವ್ಯಾಪ್ತಿಯಲ್ಲಿರುವಂತ ಗ್ರಾಮಗಳಾದ ನರ‍್ಲಹಳ್ಳಿ ಮರಳಹಳ್ಳಿ ಮತ್ತು ಗುಂಡೂರು ಗ್ರಾಮಗಳಲ್ಲಿ ಇರುವಂತಹ ಪೌತಿ, ಖಾತೆಗಳು ಸಾಮಾಜಿಕ ಭದ್ರತಾ ಪಿಂಚಣಿಗಳು ಮತ್ತು ಸ್ಮಶಾನದ ಸಮಸ್ಯೆಗಳು ಮತ್ತು ದಾರಿ ಸಮಸ್ಯೆಗಳು ಈ ಎಲ್ಲವನ್ನೂ ಕೂಡ ಎರಡು ದಿನಗಳೊಳಗಾಗಿ ಪರಿಶೀಲನೆ ಮಾಡಿ ಪೂರ್ಣ ಪ್ರಮಾಣದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಮೊಣಕಾಲ್ಮೂರು ತಹಶೀಲ್ದಾರ್ ಎನ್.ರಘುಮೂರ್ತಿ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಅವರು ತಾಲೂಕಿನ ನರ‍್ಲಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮತದಾರ ಪಟ್ಟಿಯ ಪರಿಷ್ಕರಣೆಗೆ ಸಂಬAಧಿಸಿದAತೆ ಬಿಎಲ್‌ಓ.ಗಳು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳೊAದಿಗೆ ಪರಿಶೀಲನೆ ಮಾಡಿ ಹೊಸದಾಗಿ ಸೇರ್ಪಡೆಗೊಂಡAತ ಮತ್ತು ಸ್ಥಳಾಂತರಗೊAಡAತ ಪ್ರಕರಣಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತದನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಈ ಪಂಚಾಯತಿಯಲ್ಲಿ 60 ಬೌತಿ ಖಾತೆ ಪ್ರಕರಣಗಳು ಬಾಕಿ ಇದ್ದು ಇವುಗಳನ್ನು ತ್ವರಿತವಾಗಿ ಎರಡು ದಿನಗಳಲ್ಲಿ ಆನ್ಲೈನ್‌ನಲ್ಲಿ ಅರ್ಜಿಗಳನ್ನು ನೋಂದಣಿ ಮಾಡುವಂತೆ ರಾಜಸ್ವ ನಿರೀಕ್ಷಕರಿಗೆ ಸೂಚಿಸಿದರು,
ಕಂದಾಯ ಇಲಾಖೆಗೆ ಸಂಬAಧಿಸಿದAತೆ ಪೋಡಿ ಪ್ರಕರಣಗಳು ದಾರಿ ಪ್ರಕರಣಗಳು ಸ್ಮಶಾನ ಪ್ರಕರಣಗಳು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸೂಚನೆ ನೀಡಿದರು.
ಇನ್ನೂ ಈ ಗ್ರಾಮಗಳಲ್ಲಿ ನೈರ್ಮಲಿಕರಣಕ್ಕೆ ಸಂಬAಧಿಸಿದAತೆ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಪಿಡಿಓ ರವರಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ನರ‍್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಗಂಗಣ್ಣ, ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರುಗಳು ರಾಜಸ್ವನಿರೀಕ್ಷಕರಾದ ಪ್ರಾಣೇಶ್ ಗ್ರಾಮ ಲೆಕ್ಕಾಧಿಕಾರಿ ವೀಣಾ, ಪಿಡಿಒ ಅಬ್ದುಲ್‌ಮಲಿಕ್ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!