ಶ್ರೀ ಆಂಜನೇಯಸ್ವಾಮಿಯ ದೇವಾಸ್ಥಾನದಲ್ಲಿ ಹನಮಜಯಂತಿ
ಚಳ್ಳಕೆರೆ : ಶ್ರೀ ಆಂಜನೇಯಸ್ವಾಮಿಯ ದೇವಾಸ್ಥಾನದಲ್ಲಿ ಹನಮಜಯಂತಿ ಪ್ರಯುಕ್ತ ವಿಶೇಷ ಪೂಜಾ ಕೈ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಬಿಎಂಜಿಹೆಚ್‌ಎಸ್ ಶಾಲಾ ಆವಣರದಲ್ಲಿ ಪ್ರತಿಷ್ಠಾಪಿತವಾಗಿರುವ ಶ್ರೀ ಆಂಜನೇಯಸ್ವಾಮಿಗೆ ಸೋಮವಾರ ಮುಂಜಾನೆ 5ಗಂಟೆಗೆ ಪಂಚಾಮೃತಾಭಿಷೇಕ ಹಾಗೂ ಸ್ವಾಮಿಗೆ ಎಲೆಪೂಜೆ, ಮತ್ತು ವಿಶೇಷ ಅಲಂಕಾರ ಮತ್ತು ಬೆಳ್ಳಿಗ್ಗೆ 10 ರಿಂದ ಶ್ರೀಆಂಜನೇಯಸ್ವಾಮಿಗೆ ತೊಟ್ಟಿಲು ತೂಗುವ ಸೇವೆ ಹಾಗೂ 11 ಗಂಟೆಯಿAದ ಕುಂಕುಮಾರ್ಚನೆ, ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಇರುತ್ತದೆ ಎಂದು ದೇವಾಸ್ಥಾನದ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನುಮನ ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.
ಇನ್ನೂ ವಿಶೇಷವಾಗಿ ಡಿ.11ರ ಭಾನುವಾರ ಸಂಕಷ್ಟಹರ ಗಣಪತಿ ಪೂಜೆ ಇರುತ್ತದೆ ಎನ್ನಲಾಗಿದೆ.
ದೇವಾಸ್ಥಾನದ ಹೆಚ್ಚಿನ ಮಾಹಿತಿಗಾಗಿ ವೆಂಕಣ್ಣಸ್ವಾಮಿ ಮೊ.9731656760 ಕರೆ ಮಾಡಬಹುದಾಗಿದೆ.