ಎಸ್.ಜೆ.ಎಂ. ವಿದ್ಯಾಪೀಠದ ನೂತನ ಕಾರ್ಯನಿರ್ವಹಣಾ ನಿರ್ದೇಶಕರಾಗಿ ವಾಣಿಜ್ಯೋದ್ಯಮಿ ಭರತ್‌ಕುಮಾರ್ ಅಧಿಕಾರ ಸ್ವೀಕಾರ
ಚಿತ್ರದುರ್ಗ : ವಾಣಿಜ್ಯೋದ್ಯಮಿ ಭರತ್‌ಕುಮಾರ್ ಮಾತನಾಡಿದ ಅವರು, ನಾನು ಚಿತ್ರದುರ್ಗದವನು. ನನ್ನ ವಿದ್ಯಾಭ್ಯಾಸ ಮುಗಿದ ನಂತರ ಅನೇಕ ಕಂಪನಿಗಳಲ್ಲಿ ಕೆಲಸ ಮಾಡಿz್ದೆÃನೆ. ಮೆಟ್ರೋ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಿz್ದÉÃನೆ. ಹೊರದೇಶದಲ್ಲಿ ವ್ಯಾಸಂಗ ಮಾಡಲು ಹೋಗಿ ಅಲ್ಲಿಯೇ ಕೆಲಸ ಪ್ರಾರಂಭಿಸಿz್ದÉÃನೆ. ನನಗೆ ಚಿತ್ರದುರ್ಗದಲ್ಲಿಯೇ ಇದ್ದು ಕೆಲಸ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಈಗಾಗಲೇ ಬುರುಜಿನರೊಪ್ಪ ಗ್ರಾಮ ಪಂಚಾಯಿತಿಯ 6 ಹಳ್ಳಿಗಳನ್ನು ಅಡಾಪ್ ಮಾಡಿಕೊಂಡಿz್ದÉÃನೆ. ಚಿತ್ರದುರ್ಗ ಜಿಲ್ಲೆಯನ್ನು ನೋಡುವ ಹಾಗೆ ಮಾಡಬೇಕೆಂಬುದು ನನ್ನ ಆಸೆ. ಈಗಾಗಲೇ ಆಗಿರುವ ಬೆಳವಣಿಗೆಗೆ ನಾವು ಸಹಕಾರ ನೀಡುತ್ತ ಕೆಲಸ ಮಾಡಬೇಕು. ಸರ್ಕಾರದ ಜೊತೆ ಸೇರಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದರು.
ಬಸವಪ್ರಭು ಸ್ವಾಮಿಗಳು ಮಾತನಾಡಿ, ಕಷ್ಟಕಾಲದಲ್ಲಿ ನೌಕರ ವರ್ಗದವರು, ಆಡಳಿತ ಮಂಡಳಿಯವರು, ಸಲಹಾ ಸಮಿತಿಯವರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ನಿಲುವುಗಳನ್ನು ಇಟ್ಟುಕೊಂಡು ಶ್ರೀಮಠವು ಸಾಗುತ್ತಿದೆ. ಮುರುಘಾ ಪರಂಪರೆ ಅತ್ಯಂತ ದೊಡ್ಡದು. ಪ್ರಸಾದ ನಿಲಯಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಿದ ಕೀರ್ತಿ ನಮ್ಮ ಮಠದ್ದು. ಶ್ರೀಮಠ ಅನೇಕರಿಗೆ ಉದ್ಯೋಗಾವಕಾಶವನ್ನು ಮಾಡಿಕೊಟ್ಟಿದೆ. ಇದೊಂದು ವೈಚಾರಿಕ ಮಠವಾದುದನ್ನು ತಾವೆಲ್ಲರೂ ನೋಡಿದ್ದೀರಿ ಎಂದು ಹೇಳಿದರು.
ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎಸ್.ಬಿ. ವಸ್ತçಮಠ ಮಾತನಾಡಿ, ಎಲ್ಲ ಸಿಬ್ಬಂದಿ ವರ್ಗದವರು ಭರತ್‌ಕುಮಾರ್ ಅವರಿಗೆ ಸಹಕಾರ ನೀಡಬೇಕು. ಯಾವುದೇ ಕುಂದುಕೊರತೆಗಳು ಇದ್ದರೆ ನಮ್ಮ ಹತ್ತಿರ ಬನ್ನಿ ಅಥವಾ ಬಸವಪ್ರಭು ಶ್ರೀಗಳ ಹತ್ತಿರ ಬಂದು ಸಮಸ್ಯೆ ಬಗೆಹರಿಸಿಕೊಳ್ಳಿ. ಈಗ ಯಾವುದೇ ವೇತನ ವಿಳಂಬವಾಗದೆ ನಡೆಯುತ್ತಿದೆ ಎಂದು ತಿಳಿಸಿದರು.
ಪಟೇಲ್ ಶಿವಕುಮಾರ್ ಮಾತನಾಡಿ, ಶ್ರೀಗಳ ಅನುಪಸ್ಥಿತಿಯಲ್ಲಿ ಯಾವುದೇ ನೌಕರರಿಗೆ ತೊಂದರೆಯಾಗದAತೆ ಮುನ್ನಡೆಸಿಕೊಂಡು ಬಂದಿz್ದÉÃವೆ. ಇಲ್ಲಿ ಅನೇಕ ಮಹಾತ್ಮರು ಬಂದುಹೋಗಿದ್ದಾರೆ. ಕರ್ತೃಗದ್ದುಗೆ ನಮಗೆಲ್ಲ ಶಕ್ತಿ. ನಮ್ಮಲ್ಲಿ ಯಾವುದೇ ಅವ್ಯವಹಾರ ಮಾಡಲು ಅವಕಾಶ ನೀಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ನಡೆಸಿಕೊಂಡು ಬಂದಿz್ದÉÃವೆ ಎಂದರು.
ಹೆಚ್. ಆನಂದಪ್ಪ ಮಾತನಾಡಿ, ಎಂಟುನೂರು ವರ್ಷ ಇತಿಹಾಸವಿರುವ ಈ ಮಠದಲ್ಲಿ ಆಗಬಾರದ್ದು ಆಗಿಹೋಗಿದೆ. ತಮ್ಮ ಹೊಟ್ಟೆಪಾಡಿಗಾಗಿ ಕೆಲವರು ಈ ಮಠಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ನಾನು ಜಯವಿಭವ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಹಾಗು ಮುರುಘಾ ಶರಣರನ್ನು ನೋಡಿz್ದÉÃನೆ. ಮಠಕ್ಕೆ ಕೆಟ್ಟ ಹೆಸರು ತಂದವರು ಕೆಟ್ಟವರಾಗುತ್ತಾರೆ ಎಂದು ಹೇಳಿದರು.
ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಶಿವಕುಮಾರ ಪಾಟೀಲ್, ಬಿ.ಕಾಂತರಾಜ್, ಶ್ರೀರಾಮ್, ಜಿತೇಂದ್ರಸಿAಗ್ ಶೆಖಾವತ್, ಡಿ.ಎಸ್. ಮಲ್ಲಿಕಾರ್ಜುನ್, ಎಸ್.ವಿ. ನಾಗರಾಜಪ್ಪ, ಎಸ್.ಜೆ.ಎಂ. ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಮುಖಂಡರು ಮೊದಲಾದವರಿದ್ದರು.

Namma Challakere Local News
error: Content is protected !!