ಬಯಲು ಸೀಮೆಯ 48 ಹಳ್ಳಿಯ ಜೀವನಾಡಿಯಾದ ದೊಡ್ಡಕೆರೆ : ಡಾ.ಬಿ.ಯೋಗೇಶ್ ಬಾಬು,
ಚಳ್ಳಕೆರೆ : ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಾಯಕನಟ್ಟಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ ತೆಪ್ಪೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇನ್ನೂ ಕ್ಷೇತ್ರದ ಜನಪ್ರತಿನಿಧಿಗಳಿಂದ ಸಾರ್ವಜನಿಕರು ಸಾಗರೋಪಾದಿಯಲ್ಲಿ ತೆಪ್ಪೋತ್ಸವಕ್ಕೆ ಸಾಕ್ಷಿಕರಿಸಿದರು.
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು, ನಾಯಕನಹಟ್ಟಿ ಪಟ್ಟಣದ ಐತಿಹಾಸಿಕ ಕೆರೆಗಳಲ್ಲಿ ಒಂದಾದ ಶೀ ಗುರು ತಿಪ್ಪೆರುದ್ರಸ್ವಾಮಿ ದೊಡ್ಡಕೆರೆ 48 ಹಳ್ಳಿಯ ಜೀವನಾಡಿಯಾದ ಈ ಹಿರೇಕೆರೆಯು ಅಧಿಕ ಮಳೆಯಿಂದ ಕೆರೆ ತುಂಬಿ ಕೋಡಿ ಬಿದ್ದ ಪ್ರಯುಕ್ತ ಸಮೃದ್ದಿಯ ಸಂಕೇತವಾದ ತೆಪ್ಪೋತ್ಸವ ನಮ್ಮ ಭಕ್ತಿಯ ಸಂಕೇತವಾಗಿದೆ, ಅದರಂತೆ ನಮ್ಮ ಭಾಗದ ಆರಾಧ್ಯ ದೈವ ಶ್ರೀಗುರು ತಿಪ್ಪೆರುದ್ರಸ್ವಾಮಿಯಾಗಿದ್ದಾರೆ ಎಂದರು.