ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಲಕ್ಷ ದೀಪೋತ್ಸವಕ್ಕೆ : ಹರಿದು ಬಂದ ಭಕ್ತಸಾಗರ
ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಳೆದ ಒಂದು ವಾರದಿಂದ ಕಾರ್ತಿಕೋತ್ಸವ ಸಂಭ್ರಮದ ನಿಮ್ಮಿತ್ತ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ,
ಇನ್ನೂ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಸುತ್ತಲಿನ ಆಂದ್ರಪ್ರದೇಶದ, ಕರ್ನಾಟಕ ರಾಜ್ಯದ ಭಕ್ತರು ಕೂಡ ಭಾಗವಹಿಸಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು,
ಇದೇ ಸಂಧರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ದಿವಾಕರ್, ತಹಶೀಲ್ದಾರ್ ಎನ್.ರಘುಮೂರ್ತಿ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿ ವಿಶೇಷ ಪೂಜೆ ನೆರೆವೆರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಗಂಗಾಧರಪ್ಪ, ಎಂಐಟಿ ಸ್ವಾಮಿ, ಇಓ.ಹೊನ್ನಯ್ಯ ಮುಂತಾದವರು ಉಪಸ್ಥಿತರಿದ್ದರು