ಶ್ರೀಗುರುತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಸಂಭ್ರಮ ಸಡಗರದಿಂದ ಜರಗಿತು
ಚಳ್ಳಕೆರೆ : ಮಧ್ಯೆ ಕರ್ನಾಟಕದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಗುರುತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಮಧ್ಯಾಹ್ನ 3 ಗಂಟೆಯಿAದ ಪ್ರಾರಂಭವಾದ ರಥೋತ್ಸವ ವಿವಿಧ ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲಾಗಿತ್ತು ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು,
ಮಹಾ ಮಂಗಳಾರತಿ ನಂತರ ಉತ್ಸವ ಆರಂಭಗೊAಡಿತು ಭಕ್ತರು ಹೂವಿನ ಮಾಲೆಗಳನ್ನು ಹಾಕಿ ರಥೋತ್ಸವವನ್ನು ಶೃಂಗಾರ ಗೊಳಿಸಲಾಗಿತ್ತು. ಪಟ್ಟಣದ ರಾಜಬೀದಿಗಳಲ್ಲಿ ರಥೋತ್ಸವ ಸಾಗುವ ಮೂಲಕ ಸಾವಿರಾರು ಭಕ್ತರು ತಮ್ಮ ಹರಿಕೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಮಂಡಕ್ಕಿ ಬಿಲ್ಲ ಮೆಣಸು ದವನ ಭಕ್ತರಿಗೆ ಸಿಹಿ ಹಂಚುವ ಮೂಲಕ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವವನ್ನು ಕಣ್ತುಂಬಿಕೊAಡ ಭಕ್ತಗಣ.
ಇನ್ನು ರಥೋತ್ಸವವನ್ನು ಎಳೆಯುವಂತಹ ಭಕ್ತಾದಿಗಳು ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಜೈ, ತಿಪ್ಪೇರುದ್ರ ಸ್ವಾಮಿಗೆ ಜೈ ಎಂದು ಘೋಷ ವಾಕ್ಯವನ್ನು ಕೂಗುತ್ತಾ ರಥೋತ್ಸವವನ್ನು ಎಳೆಯುತ್ತಾ ಮುನ್ನಡೆದರು.
ಇನ್ನು ರಥೋತ್ಸವದ ವೇಳೆ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೇವಸ್ಥಾನದ ದೈವಸ್ಥರು, ಮಠಸ್ಥರು ಗ್ರಾಮಸ್ಥರು ಸೇರಿದಂತೆ ಎಂವೈಟಿ.ಸ್ವಾಮಿ, ತಿಪ್ಪೇರುದ್ರಪ್ಪ, ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಾಣಧಿಕಾರಿ ಎಚ್.ಗಂಗಾಧರಪ್ಪ, ಎನ್.ಮಹಾಂತಣ್ಣ, ಉಮೇಶ್, ಬಸಪ್ಪ ನಾಯಕ ಮಾದಯ್ಯನಹಟ್ಟಿ, ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್, ಮನು, ಸಿಬ್ಬಂದಿಗಳು ಸೇರಿದಂತೆ ಹೋಬಳಿಯ ಸಾವಿರಾರು ಭಕ್ತರು ರಥೋತ್ಸವದ ವೇಳೆ ಭಾಗಿಯಾಗಿದ್ದರು.