ಜೀವನದಲ್ಲಿ ಕಳೆದ ಹೋದ ಸಮಯ ಮತ್ತು ವಯಸ್ಸು ಮತ್ತೆ ಸಿಗದು : ಪ್ರೊ. ರಾಜಶೇಖರ್ ಹೆಬ್ಬಾರ್ ಹೇಳಿಕೆ

ಚಳ್ಳಕೆರೆ : ವಿದ್ಯಾರ್ಥಿಗಳು ಸೋಷಿಯಲ್ ಮೀಡಿಯಾದಿಂದ ದೂರ ಇದ್ದು, ವೇಳಾಪಟ್ಟಿ ಹಾಕಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸಿನ ಹಾದಿ ಕ್ರಮಿಸಲು ಸಾಧ್ಯ ಎಂದು ಶಿವಮೊಗ್ಗ ಕಾಲೇಜುಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್ ತಿಳಿಸಿದರು.
ಚಿತ್ರದುರ್ಗ ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡುತ್ತ, ಶೈಕ್ಷಣಿಕ ವ್ಯವಸ್ಥೆಯು ಕೊರೋನಾದಿಂದ ಏರುಪೇರಾಗಿದೆ. ಪರಿಪೂರ್ಣ ವಿದ್ಯಾರ್ಥಿಯನ್ನಾಗಿಸಲು ಎನ್‌ಎಸ್‌ಎಸ್ ತುಂಬ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ತಂದೆ ತಾಯಿಗಿಂತ ಹೆಚ್ಚು ಪ್ರಭಾವ ಬೀರುವುದು ಶಿಕ್ಷಕ ಮತ್ತು ಗುರು. ಪ್ರತಿಯೊಬ್ಬ ಮಾನವನಿಗು ಎಲ್ಲ ಅವಕಾಶ ಸಿಗುತ್ತದೆ. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ತಂದೆ ತಾಯಿಯ ಋಣ ತೀರಿಸಲು, ಸಪ್ತಋಷಿ ದೇವಾನುದೇವತೆಗಳಿಗೆ ಪ್ರದಕ್ಷಿಣೆ ಹಾಕಿದರು ಪ್ರಯೋಜನವಿಲ್ಲ. ಮಕ್ಕಳಿಗೆ ತಂದೆ ತಾಯಿಗಳು ಹಾಕಿರೋ ಶ್ರಮ ಅಸಾಧಾರಣವಾದದ್ದು. ದೇಹ ಸೌಂದರ್ಯಕ್ಕಿAತ ಮಾನವೀಯ ಗುಣಗಳಿಗೆ ಮಹತ್ವ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗೌರಮ್ಮ ಸರ್ಕಾರಿ ಪ್ರ.ದ. ಕಾಲೇಜು ನೋಡೆಲ್ ಅಧಿಕಾರಿ ಲೋಕೇಶ್, ಜಗದೀಶ್ ಮೊದಲಾದವರು ವೇದಿಕೆಯಲ್ಲಿದ್ದರು.

About The Author

Namma Challakere Local News
error: Content is protected !!