• ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಕೆ ಆರ್ ತಿಪ್ಪೇಸ್ವಾಮಿ ಹೇಳಿಕೆ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ
ಮಲ್ಲೂರಹಳ್ಳಿ ಗ್ರಾಮದ ಶ್ರೀ ಮೂಗಬಸವೇಶ್ವರ ಹೈಟೆಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೀನ್ ಡೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿಗೆ ನೀರಿರುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಯ ಮುಂದೆ ಗಿಡ‌ನೆಡುವುದರ ಮೂಲಕ ಪರಿಸರದ ಜಾಗೃತಿ ಸಾರಬೇಕು ಎಂದು ಕೆ ಆರ್ ತಿಪ್ಪೇಸ್ವಾಮಿ ಹೇಳಿದ್ದಾರೆ.

ನಮ್ಮ ಜೀವ ಉಳಿಸುವ ಆಕ್ಸಿಜನ್ ತುಂಬಾ ಮಹತ್ವವಾದದ್ದು ಕಳೆದ ಎರಡು ವರ್ಷದ ಹಿಂದೆ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಲು ಬೆಳೆಸಲು ಪಣತೊಡಬೇಕೆಂದು ತಿಳಿಸಿದರು.

ಈ ವೇಳೆ ಸಿ ಆರ್ ಪಿ ಲಿಂಗರಾಜ್ ರವರು ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಕೇವಲ 7,13,284 ಚದರ ಕಿಲೋಮೀಟರ್ ಕಾಡು ಇದೆ ಭಾರತದ ವಿಸ್ತೀರ್ಣ 32 ಲಕ್ಷ ಹೊಂದಿದ್ದು ಖಾಸಗಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ

ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಪರಿಸರ ಜಾಗೃತಿಯ ಬಗ್ಗೆ ಹರಿವು ಮೂಡಿಸುವ ಕಾರ್ಯಕ್ರಮಗಳು ಎಚ್ಚಾಗಿ ಜರುಗಬೇಕು,

ಈ ಭಾಗದಲ್ಲಿ ಕರ್ನಾಟಕದ ಅತಿ ಕಡಿಮೆ ಬೀಳುವ ಪ್ರದೇಶವೆಂದರೆ ಅದು ನಾಯಕನಹಟ್ಟಿ ಹೋಬಳಿ ಈ ಭಾಗದಲ್ಲಿ ಅತಿ ಹೆಚ್ಚು ಗಿಡಗಳನ್ನು ಹಾಕಿ ಪರಿಸರವನ್ನ ರಕ್ಷಿಸುವಂತಹ ಜವಾಬ್ದಾರಿ ಈ ಭಾಗದ ಜನತೆಗೆ ತುಂಬಾ ಅವಶ್ಯಕ ಎಂದು ಆರ್‌ಪಿ ಲಿಂಗರಾಜ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗುಡ್ಡದ ಕಪಿಲೆ ಶಾಲೆಯ ಮುಖ್ಯೋಪಾಧ್ಯರಾದ ಸೌಭಾಗ್ಯ,
ಪತ್ರಕರ್ತ ಕೆ ಟಿ ಓಬಳೇಶ್, ಮೂಗ ಬಸವೇಶ್ವರ ಹೈ ಟೆಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸುನೀತ, ಶಿಕ್ಷಕಿರಾದ ಲಕ್ಷ್ಮಿ ,ಶ್ವೇತ, ನಾಗವೇಣಿ, ಶಿಲ್ಪ ,ಪಾಲಯ್ಯ, ಪಾಲಾಕ್ಷ, ಸೇರಿದಂತೆ ಮುಂತಾದವರು ಇದ್ದರು

About The Author

Namma Challakere Local News
error: Content is protected !!