ಚಳ್ಳಕೆರೆ ತಾಲೂಕಿನ
ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮವನ್ನು ಕುರಿತು ಗ್ರಾಮ ಪಂಚಾಯತಿ ಪಿಡಿಓ ಕೋರ್ಲಯ್ಯ ರವರು ಮಕ್ಕಳಿಗೆ ಮುಂದಾಗಬಹುದಾದ ಲೈಂಗಿಕ ದೌರ್ಜನ್ಯಗಳಿಂದ ಯಾವರೀತಿ ಪರಾಗಬೇಕು ಯಾವೇಲ್ಲ ಶಿಸ್ತು ಕಾಪಾಡಬೇಕು ಎಂದು ಮಕ್ಕಳಿಗೆ ಪ್ರಾಸ್ತಾವಿಕ ತಿಳಿಸಿದರು.

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲರಾದ ಟಿ.ಶಶಿಕುಮಾರ್ ಮಾತನಾಡಿ, ಇತ್ತಿಚೀನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಗಳು ನಡೆಯುತ್ತಿರುವುದು ವಿಷಾಧನೀಯ, ಇಂತಹ ಸಂಧರ್ಭದಲ್ಲಿ ಪೋಷಕರು ಮಕ್ಕಳಿಗೆ ಮನೆಯಲ್ಲಿ ಸಾರ್ವಜನಿಕವಾಗಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹರಿವು‌ಮೂಡಿಸುವ ಕೆಲಸವಾಗಬೇಕು, ಇಂದಿನ ದಿನಮಾನಗಳಲ್ಲಿ ಮಕ್ಕಳ ಮೇಲೆ ಏರಳವಾಹಿ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಆದ್ದರಿಂದ ಮಕ್ಕಳಿಗೆ ಜಾಗೃತಿ ಮುಖ್ಯವಾಗಿದೆ ಎಂದರು.

ಇನ್ನೂ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ,
ಶಿಕ್ಷಕರಾದ ಹುಲುಗಪ್ಪ, ಅನುಸೂಯಮ್ಮ, ಸುರೇಶ್, ಹಾಗೂ ಪಂಚಾಯತಿ ಸಿಬ್ಬಂದಿಯಾದ ನಾಗರಾಜ್ ಪ್ರಕಾಶ್, ಮತ್ತು ರಾಜಣ್ಣ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಕೆಬಿ ಮಾರಣ್ಣ ಇತರರು ಇದ್ದರು

About The Author

Namma Challakere Local News
error: Content is protected !!