ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಗಳಲ್ಲಿ ಹೊಸ ಸೇರ್ಪಡೆಗಳು ಮತ್ತು ಮರಣ ಹೊಂದಿದ ಹಾಗೂ ಸ್ಥಳಾಂತರ ಗೊಂಡಿರುವ ಮತದಾರರನ್ನು ಮನೆಮನೆ ಸಮೀಕ್ಷೆ ಮಾಡಿ ನಮೂನೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಆದಷ್ಟು ಬೇಗ ಪರೀಕ್ಷಿತ ಮತದಾರ ಪಟ್ಟಿಗೆ ಬೇಕಾಗಿರುವಂತಹ ಮಾಹಿತಿಯನ್ನು ಸಂಗ್ರಹಿಸುವಂತೆ ಚಳ್ಳಕೆರೆ ತಾಲೂಕು ದಂಡಾಧಿಕಾರಿ ಹಾಗೂ ತಹಸಿಲ್ದಾರ್ ಎನ್. ರಘುಮೂರ್ತಿ ಮತಗಟ್ಟೆ ಅಧಿಕಾರಿಗಳಿಗೆ ಪ್ರತಿಕ್ಷಕೆ ಮೂಲಕ ಸೂಚಿಸಿದರು.

ತಾಲೂಕಿನ ಕಮ್ಮತ್ ಮರಿಕುಂಟೆ, ಕಾಪರಹಳ್ಳಿ, ಜಡೆಕುಂಟೆ ಹಾಗೂ ಗೋಪನಹಳ್ಳಿ ಗ್ರಾಮಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ನವರ ಜೊತೆಯಲ್ಲಿ ಬೇಟಿ ನೀಡಿ ಮತಗಟ್ಟೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇದರ ಬಗ್ಗೆ ಸಲಹೆ ನೀಡಿದರು.

ಕಂದಾಯ ಇಲಾಖೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದು ಇವರುಗಳೊಂದಿಗೆ ಮನೆಮನೆಗೆ ಭೇಟಿ ನೀಡಿ ಪ್ರತಿ ಮನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಹಾಗೂ ಎಷ್ಟು ಜನ ಗ್ರಾಮ ದಿಂದ ಬೇರೆ ಕಡೆಗೆ ಸ್ಥಳಾಂತರ ಗೊಂಡಿದ್ದಾರೆ ಎಂಬುದನ್ನು ತಕ್ಷಣ ಖಚಿತಪಡಿಸಿಕೊಂಡು ಯಾವುದೇ ದೂರು ಬಾರದಂತೆ ಮುಂಜಾಗ್ರತೆ ನಡೆಸಿ ಅಗತ್ಯವಿದ್ದಲ್ಲಿ ಮೃತರ ಮರಣ ದೃಢೀಕರಣ ಪತ್ರವನ್ನು ಪಡೆದು ಈ ಕಾರ್ಯವನ್ನು ಪೂರ್ಣಗೊಳಿಬೇಕು

ಯಾವುದೇ ಅಧಿಕಾರಿಗಳು ಉದಾಸಿನ ಮಾಡದೆ ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ತಿಳಿಸಿದರು

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾಹಿತಿನೀಡಿ, ಪ್ರತಿ ಮತಗಟ್ಟೆಯ ಅಂಕಿ ಅಂಶವನ್ನು ಬಿ.ಎಲ್.ಓ ಗಳು ನಮ್ಮಲ್ಲಿ ಇಟ್ಟುಕೊಂಡಿರಬೇಕು ಇದರಲ್ಲಿ ರಾಜ್ಯಮಟ್ಟದ ಎಪಿಕ್ ಅನುಪಾತ. ಜಿಲ್ಲಾಮಟ್ಟದ ಎಪಿಕ್ ಅನುಪಾತ. ಮತ್ತು ಆಯಾ ಮತಗಟ್ಟೆಯ ಅನುಪಾತ ವನ್ನು ಇಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ತಪಾಸಣೆಗೆ ಬಂದಾಗ ಮಾಹಿತಿ ನೀಡಬೇಕು

ತಮ್ಮ ತರಗತಿಯ ಸಮಯವನ್ನು ಕಳೆದುಕೊಳ್ಳದೆ ತರಗತಿಯ ಅವಧಿಯ ಹಿಂದೆ ಮುಂದೆ ಸಮಯವನ್ನು ಸರಿದೂಗಿಸಿಕೊಂಡು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ರೊಂದಿಗೆ ಸಮನ್ವಯ ಮಾಡಿ
ಈ ಕಾರ್ಯವನ್ನು ಯಾವುದೇ ರೀತಿ ಪ್ರತಿಉತ್ತರ ಹೇಳದೆ ಪೂರ್ಣಗೊಳಿಸುವಂತೆ ಹೇಳಿದರು

ಗ್ರಾಮದ ಮನೆ ಮನೆ ಭೇಟಿಗೆ ಸಂಬಂಧಿಸಿದ ಪ್ರಾತ್ಯಕ್ಷತೆಯೊಂದಿಗೆ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಸಂಬಂಧಿಸಿದ ಶಿಕ್ಷಕರು . ಹಾಗೂ ಗ್ರಾಮ ಲೆಕ್ಕಾಧಿಕಾರಿ ಪರಮಶಿವಯ್ಯ. ಕೇಶವಾಚಾರ್ಯ . ಹಾಜರಿದ್ದರು

About The Author

Namma Challakere Local News
error: Content is protected !!