ಚಳ್ಳಕೆರೆಯಲ್ಲಿ ಟ್ರಾಪಿಕ್ ನಿಷ್ಕಿçಯೆ : ನೆಹರು ವೃತ್ತದಲ್ಲಿ ವಾಹನಗಳ ದರ್ಬಾರು : ವಿದ್ಯಾರ್ಥಿನಿ ಮೇಲೆ ಹರಿದ ಲಾರಿ
ಚಳ್ಳಕೆರೆ : ನಗರದ ನೆಹರು ವೃತ್ತದ ಮೂಲಕ ಎಂದಿನAತೆ ಕಾಲೇಜಿಗೆ ದಾವಿಸಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ಅಪಘಾತಕ್ಕೆ ಸಿಲುಕಿ ಇಂದು ಆಸ್ವತ್ರೆಯಲ್ಲಿ ನರಕ ಅನುಭವಿಸುವ ಘಟನೆ ಜರುಗಿದೆ.
ಹೌದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿನಿತ್ಯವೂ ನಗರದ ಹಲವು ಶಾಲಾ ಕಾಳೇಜುಗಳಿಗೆ ಮುಂಜಾನೆಯೇ ಬಸ್ ಹತ್ತಿ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಾರೆ.
ಆದರೆ ಎಲ್ಲಾ ಖಾಸಗಿ ಬಸ್ ವಾಹನಗಳು ಸೆರಿದಂತೆ ನೆಹರು ವೃತ್ತ ಪಕ್ಕದಲ್ಲೆ ಅನಾದಿಕೃತ ಬಸ್ ನಿಲ್ದಾಣವಂತೆ ನಿಲ್ಲಿಸುವುದರಿಂದ ಒಟ್ಟಿಗೆ ಸಾವಿರಾರು ವಿದ್ಯಾರ್ಥಿಗಳು ರಸ್ತೆ ಮೇಲೆ ಓಗುವುದರಿಂದ ಒಮ್ಮೆಲೆ ಟ್ರಾಪಿಕ್ ಜಾಮ್ ಹಾಗಿ ಇತರ ಅಫಘಾತಗಳಿಗೆ ಕಾರಣವಾಗುತ್ತವೆ.
ಇನ್ನೂ ಟ್ರಾಪಿಕ್ ಸರಿಪಡಿಸುವ ಪೊಲೀಸ್ ಇಲಾಖೆ ಮಾತ್ರ ಜಾಣ ಕುರುಡುತನ ತೋರಿಸುತ್ತದೆ ಇನ್ನಾದರೂ ಖಾಸಗಿ ವಾಹನಗಳ ನಿಲ್ಲಿಸುವಿಕೆಗೆ ಕಡಿವಾಣ ಹಾಕಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಪ್ರಾಣ ಕಾಪಾಡುವರೋ ಕಾದು ನೋಡಬೇಕಿದೆ.