ಚಳ್ಳಕೆರೆ : ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ದೊಡ್ಡೇರಿ ಗ್ರಾಮದಲ್ಲಿ ,”ಮಣ್ಣು ಪರೀಕ್ಷೆ ಮತ್ತು ಪಶುಗಳಿಗೆ ಲಸಿಕಾ ಅಬಿಯಾನ ಹಾಗೂ ಗ್ರಾಮದ ನೈರ್ಮಲ್ಯತೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಚಿತ್ರದುರ್ಗ ಮತ್ತು ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗು ಕೃಷಿ ಇಲಾಖೆಗಳು ಚಳ್ಳಕೆರೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸಲಾಯಿತು ಹಾಗೂ ನೈರ್ಮಲ್ಯತೆ ಕುರಿತು ಗ್ರಾಮದಲ್ಲಿ ಶಿಬಿರಾರ್ಥಿಗಳೊಂದಿಗೆ ಅಧಿಕಾರಿಗಳು ಜಾಥಾ ಕಾರ್ಯಕ್ರಮ ನಡೆಸಿದರು.
ದೊಡ್ಡೇರಿ ಗ್ರಾಮದ NSS ಶಿಬಿದಲ್ಲಿ ಜಿಲ್ಲಾಪಂಚಾಯತ್ ವತಿಯಿಂದ ಶ್ರೀಮತಿ ಸುಮ ACO ಜಿಲ್ಲಾ ಪಂಚಾಯತ್ ಚಿತ್ರದುರ್ಗ , ಶ್ರೀಮತಿ ಪ್ರಮಿಳ ,ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಶ್ರೀ ರೇವಣ್ಣ, ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ,ಚಳ್ಳಕೆರೆ, ಶ್ರೀ ಅಶೋಕ್ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ,ಚಳ್ಳಕೆರೆ, ಶ್ರೀ ವಿರುಪಾಕ್ಷಪ್ಪ ,ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ,ಚಳ್ಳಕೆರೆ, ಶ್ರೀಮತಿ ಷಾಹಿನಾ ಬಾನು ಗ್ರಾಮ ಪಂಚಾಯತಿ ಸದಸ್ಯರು, ಶ್ರೀಮತಿ ರೇಣುಕಮ್ಮ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸರ್ವ ಸದಸ್ಯರೋಂದಿಗೆ ಹಾಗು ಶಿಬಿರಾರ್ಥಿಗಳೊಂದಿಗೆ ದೊಡ್ಡೇರಿ ಗ್ರಾಮದಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತಾ ಆಂದೋಲನದಡಿ ಊರಿನಲ್ಲಿ ಜಾತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.