ಚಳ್ಳಕೆರೆ : ಜನರಿಂದ ಆಯ್ಕೆಯಾದ ಸದಸ್ಯರು ಪಕ್ಷ ಬೇದ ಮರೆತು ಗ್ರಾಮಗಳ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಸಮಗ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಶಾಸಕ ಟಿ ರಘುಮೂರ್ತಿ ಕಿವಿ ಮಾತು ಹೇಳಿದರು.

ನಗರದ ತಾಲೂಕು ಪಂಚಾಯತ್ ಸಂಭಾಗಣದಲ್ಲಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆವತಿಯಿಂದ ಆಯೋಜಿಸಿದ್ದ ದೂರದೃಷ್ಠಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಚರಂಡಿ ರಸ್ತೆ ಕಾಮಗಾರಿಗಳನ್ನು ಬಿಲ್ ಪಡೆಯಲು ಮಾತ್ರ ಮಾಡದೆ ಗ್ರಾಮದಲ್ಲಿ ಕುಡಿಯುವ ನೀರು. ವಿದ್ಯುತ್ ದೀಪ.

ಚರಂಡಿ ಸ್ವಚ್ಚತಿ.ವಸತಿ.ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದರೆ ಜನರು ದೂರುವುದಿಲ್ಲ.

ನರೇಗಾ.ಸೇರಿದಂತೆ ಹಲವು ಯೋಜನೆಗಳಿಂದ ಸರಕಾರ ಅನುದಾನ ಬಿಡುಗಡೆಗೊಳಿಸುತ್ತಿದ್ದು ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದರು.

ತಾಪಂ ಇಒ ಹೊನ್ನಯ್ಯ ಮಾತನಾಡಿ ಗ್ರಾಪಂ ಆಯ್ಕೆಯಾದ ಸದಸ್ಯರಿಗೆ ಸರಕಾರ ದೂರದೃಷ್ಟಿ ತರಬೇತಿ ನೀಡುವ ಉದ್ದೇಶ ಗ್ರಾಮಗಳಲ್ಲಿನ ಸಮಸ್ಯೆಗಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ. ಶಿಕ್ಷಣ.

ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲ. ಬಡತನ ಮತ್ತು ಜೀವನೋಪಯ ಕೌಶಲ್ಯ .ಸಾಮಾಜಿಕ ನ್ಯಾಯ ಸಾಮಾಜಿಕ ಸುರಕ್ಷೆ. ಮೂಲಭೂತ ಸೌಕರ್ಯ. ಉತ್ತಮ ಆಡಳಿತ ಬಗ್ಗೆ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದ್ದು ಅಗತ್ಯ ಸಮಸ್ಯೆ ಯೋಜನೆ ಬಗ್ಗೆ ಕ್ರೀಯಾ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸ ಬೇಕು ಸದಸ್ಯರು ತರಬೇತಿಯಲ್ಲಿ ಮಾಹಿತಿ ಮನನ ಮಾಡಿಕೊಂಡು ಗ್ರಾಮಗಳ ಸಮಗ್ರ ಅಭಿವೃದ್ದಿ ಪಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ತ್ಯಾಗರಾಜ್.ಪಾರ್ವತಮ್ಮ.ಗೀತಮ್ಮ ಹಾಗೂ ಸದಸ್ಯರು ನರೇಗಾ ಸಹಾಯಕ ನಿರ್ದೇಶಕ ಸಂತೋಷ್. ಗ್ರಾಮೀಣ ಸಹಾಯಕ ನಿರ್ದೇಶಕ ಸಂಪತ್. ತಾಪಂ ಯೋಜನಾಧಿಕಾರಿ ದಿವಾಕರ್ ಇದ್ದರು.

About The Author

Namma Challakere Local News
error: Content is protected !!