ಅನ್ಯರ ಕಷ್ಟಕ್ಕೆ ಸ್ಪಂಧಿಸೋಣ : ತಹಶೀಲ್ದಾರ್ ಎನ್.ರಘುಮೂರ್ತಿ ಕರೆ
ಚಳ್ಳಕೆರೆ : ಇಡೀ ಪ್ರಪಂಚದಲ್ಲಿ ಅನ್ಯರಿಗೋಸ್ಕರ ಬದುಕುವ ವ್ಯಕ್ತಿಗಳನ್ನು ತೀರ ಕಡಿಮೆ ಕಾಣಬಹುದು ಆದರೆ ಅಂತಹ ವ್ಯಕ್ತಿಗಳನ್ನು ಅವರು ಸತ್ತ ನಂತರ ಕೂಡ ಅವರ ಹೆಸರು ಚಿರಸ್ಮಯಿಯಾಗಿ ಉಳಿಯುತ್ತದೆ ಅಂತಹ ಕಾರ್ಯ ನಾವು ನೀವು ಮಾಡಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಛೆಂರ‍್ಸ್ ಆಪ್ ಕಾಮರ್ಸ್ನಲ್ಲಿ ಹೂವಿನ ಅಲಂಕಾರ ಮಾಲೀಕರ ಸಂಘದಿAದ ಆಯೋಜಿಸಿದ್ದ ನೂತನ ಸಂಘದ ನಾಮಫಲಕ ಅನಾವರಣ ಸಮಾರಂಭದ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಜೀವನ ಸಾಗಿಸುತ್ತಾರೆ, ಆದರೆ ತನಗಿಂತ ಅನ್ಯರ ಪರವಾಗಿ ನಿಲುವನ್ನು ತಾಳುವ ಮೂಲಕ ಇತರರಿಗೆ ಪ್ರೇರೆಪಣೆ ಗೊಳಿಸುವ ಮೂಲಕ ಜೀವನ ಸಾಗಿಸುವುದು ಉತ್ತಮ ಎಂದರು.
ಇನ್ನೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಮಾತನಾಡಿ, ಸಾಮಾಜದಲ್ಲಿ ಎಲ್ಲಾ ಸ್ಥರದ ಜನಗಳ ಆಶಾಭಾವನೆಗೆ ತಕ್ಕಂತೆ ಅವರದ್ದೆ ಆದಾ ಒಂದು ಚಟುವಟಿಕೆಗಳಿಗೆ ಹಿಂಬು ನೀಡುವುದು ಸಮಾಜದ ಆಶಯ ಅದರಂತೆ ಇಂದು ಹೂವಿನ ಅಲಂಕಾರದ ನೂತನ ಸಂಘ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

ಇದೇ ಸಂಧರ್ಭದಲ್ಲಿ ನಿವೇಶನಕ್ಕಾಗಿ ಶಾಸಕ ಟಿ.ರಘುಮೂರ್ತಿಗೆ ಹಾಗೂ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ನೀಡಿದರು.
ಇನ್ನೂ ಜಿಲ್ಲಾ ಕಾರ್ಯದರ್ಶಿ ಜೆಪಿ.ಜಯಪಾಲಯ್ಯ ಮಾತನಾಡಿ, ಇಂದು ತಮ್ಮದೇ ಆದ ವೃತ್ತಿ ಜೀವನ ಕಟ್ಟಿಕೊಂಡು, ತಮ್ಮ ಸ್ವತಃ ಕಾಲ ಮೇಲೆ ದುಡಿಯುವ ಈ ವರ್ಗಕ್ಕೆ ಸರಕಾರದಿಂದ ನಿವೇಶನ ನೀಡುವ ಅನಿವಾರ್ಯವಿದೆ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ಕೆಟಿ.ಕುಮಾರಸ್ವಾಮಿ, ಬಾಳೆಕಾಯಿ ರಾಮದಾಸ್, ಆಮ್ ಆದ್ಮಿಪಕ್ಷದ ತಾಲೂಕು ಅಧ್ಯಕ್ಷ ಬಿ.ಪಾಪಣ್ಣ, ಹೂವಿನ ಜಗದೀಶ್, ಮಂಜುನಾಥ್, ಮುಖಂಡ ಚೇತನ್ ಕುಮಾರ್, ಟಿಜೆ.ವೆಂಟಕೇಶ್, ಜಿಲ್ಲಾ ಸಂಘದ ಮಾಲೀಕ ಅಧ್ಯಕ್ಷ ಗಂಗಾಧರ್, ಮಧುಕುಮಾರ್, ಸುನಿಲ್ ಕುಮಾರ್, ಶಿವಕುಮಾರ್, ರಾಘು, ಸಂಘದ ಅಧ್ಯಕ್ಷ ಎಂ.ಚಿದಾನAದ, ಕಾರ್ಯದರ್ಶಿ ಚಂದ್ರಕಾAತ್, ಮಲ್ಲಿಕಾರ್ಜುನಾ, ಜಗದೀಶ್, ತಿಪ್ಪೆಸ್ವಾಮಿ, ಬಾಬು ಅಶೋಕ್, ಚಾರಿ, ಕರ್ಣ, ಮಂಜುನಾಥ್, ಸತೀಶ್, ಬಸರವಾಜ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!