ಭಕ್ತ ಕನಕದಾಸರ ಜಯಂತಿಗೆ : ಪುಟಾಣಿಗಳ ಬಾಯಲ್ಲಿ ದಾಸರ ಕಿರ್ತನೆಗಳು
ಚಳ್ಳಕೆರೆ : ನಗರದ ವಾಸವಿ ಕಾಲೇಜ್ ಹಿಂಬಾಗದ ಬಾಲಕಿಯರ ವಸತಿ ಕೇಂದ್ರದಲ್ಲಿ ಕನಕದಾಸರ ಜಯಂತಿಯನ್ನು ಅತೀ ಸರಳವಾಗಿ ಆಚರಿಸಿದರು.
ನಗರಸಭೆ ಸದಸ್ಯರಾದ ಎಂ.ಜೆ.ರಾಘವೇAದ್ರ , ಮಲ್ಲಿಕಾರ್ಜುನ, ರಮೇಶ್‌ಗೌಡ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮಕ್ಕಳೊಟ್ಟಿಗೆ ದಾಸರ ಕಿರ್ತನೆಗಳನ್ನು ಹಾಡಿ ಜಯಂತಿಗೆ ಶುಭಾಷಯ ಕೋರಿದರು.
ಇನ್ನೂ ವಸತಿ ಶಾಲೆಯ ಮೇಲ್ವಿಚಾರಕರಾದ ಗಂಗಾಧರ್, ಧರ್ಮಪತ್ನಿ ಶಾಂತ ಮತ್ತು ಮಕ್ಕಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಇನ್ನೂ ಕುರುಬ ಸಮಾಜದ ಮುಖಂಡ ನಗರಸಭಾ ಸದಸ್ಯ ಎಂ.ಜೆ.ರಾಘವೇAದ್ರ ಮಾತನಾಡಿ, ಶ್ರೀ ಕೃಷ್ಣನ ಅನನ್ಯ ಭಕ್ತ ಉಡುಪಿಯ ದೇವಸ್ಥಾನದಲ್ಲಿ ಕನಕದಾಸರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡ ತೊಡಗಿದರಂತೆ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂದು ಅವರು ಹಾಡಿದಾಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಲಾಗಿದೆ ಅದನ್ನು ‘ಕನಕನ ಕಿಂಡಿ’ಎನ್ನಲಾಗುತ್ತದೆ. ಎಂದು ಸ್ಮರಿಸಿದರು.