ಕೇವಲ ಸ್ವಚ್ಚತೆ ಕಾರ್ಯ ನಡೆಸುವುದಕ್ಕಾಗಿಯೇ ಶ್ರಮದಾನ ಶಿಬಿರಗಳು ಮಾಡಬಾರದು : ಬಿ.ಶಾಂತಕುಮಾರಿ ಕರೆ
ಚಳ್ಳಕೆರೆ : ಕೇವಲ ಸ್ವಚ್ಚತೆ ಕಾರ್ಯ ನಡೆಸುವುದಕ್ಕಾಗಿಯೇ ಶ್ರಮದಾನ ಶಿಬಿರಗಳು ನಡೆಯುತ್ತವೆ ಎಂಬ ಭಾವನೆ ಬಿಟ್ಟು ಹಳ್ಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಉತ್ತಮ ಪರಿಸರ ಸೃಷ್ಠಿಸುವ ಕೆಲಸವೆಂದು ತಿಳಿಯಬೇಕು ಎಂದು ಗ್ರಾಮದ ಮುಖಂಡರಾದ ಮುನಿಯಪ್ಪ ಹೇಳಿದ್ದಾರೆ.
ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾಯೋಜನೆಯ ಘಟಕದಿಂದ ಆಮ್ಮಿಕೊಂಡ ಏಳು ದಿನದ ವಿಶೇಷ ಶಿಬಿರದಲ್ಲಿ ಅಜಾದ್ಕಿ ಅಮೃತ ಸಮುದಾಯ ಅಭಿವೃದ್ದಿ ಯೋಜನೆ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಮಹಾತ್ಮ ಗಾಂಧೀಜಿಯವರ ಕನಸಿನ ಕೂಸಾಗಿದ್ದ ಸ್ವಚ್ಚತೆ, ಶ್ರಮದಾನ ಇಂದು ರಾಷ್ಟಿçÃಯ ಸೇವಾಯೋಜನೆಯಾಗಿದೆ. ಇಂತಹ ಶಿಬಿರಗಳಲ್ಲಿ ಪ್ರಶಿಕ್ಷಣಾರ್ಥಿಗಳು ತಾವು ಕಲಿತು ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಬಿ.ಶಾಂತಕುಮಾರಿ ಮಾತನಾಡಿ, ಗ್ರಾಮಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲೂ ವ್ಯಾಪಾರಿಕಣವಾಗಿರುವುದರಿಂದ ಉಳ್ಳುವರಿಗೆ ಮಾತ್ರ ಸೌಲಭ್ಯಗಳು ದೊರೆಯುತ್ತವೆ, ಕಡು ಬಡವರಿಗೆ ಶಿಕ್ಷಣ, ನೌಕರಿ ಪಡೆಯಲು ಕಷ್ಟಸಾಧ್ಯ ಆದ್ದರಿಂದ ಸರಕಾರಿ ನೌಕರಿಯನ್ನೇ ನಂಬಿಕೊಳ್ಳದೆ ಸ್ವಂತ ದುಡಿಮೆ ಖಾಸಗಿ ಉದ್ಯೋಗ, ಪಶುಪಾಲನೆಯಂತಹ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಗಮನಹರಿಸಬೇಕಿದೆ ಆದ್ದರಿಂದ ಪೌರತ್ವ ಶಿಬಿರದಲ್ಲಿ ವ್ಯವಸಾಯದ ಬಗ್ಗೆ ಮನವರಿಕೆಯ ಪಾಠವಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಉಪನ್ಯಾಸಕ ಲಕ್ಷö್ಮಣ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಶಿವಣ್ಣ, ವೆಂಕಟೇಶ್, ರೆಣುಕಮ್ಮ, ಷಹಾಯಿನಾ ಬಾನು, ಗುಂಡಣ್ಣ, ಜಯಣ್ಣ, ಉಪನ್ಯಾಸಕ ವಸಂತಕುಮಾರ್, ಚಂದ್ರಶೇಖರ್, ಕೆಬಿ.ಪುಷ್ಪಲತಾ, ಮಹದೇವ ಕುಮಾರಿಶೌರಿ, ಇತರರು ಪಾಲ್ಗೊಂಡಿದ್ದರು.