ಪಿಡಿಓಗಳಿಗೆ ಖಡಕ್ ವಾರ್ನಿಂಗ್ ನೀಡಿದ ನೂತನ ಜಿಪಂ. ಸಿಇಓ ಎಂ.ಎಸ್.ದಿವಾಕರ್
ಚಳ್ಳಕೆರೆ : ಎಲ್ಲಾ ಪಿಡಿಓಗಳು ಪ್ರತಿ ದಿನ ನಿಮ್ಮ ಮೂಲ ಸ್ಥಾಳದಲ್ಲಿ ಹಾಜರಿರÀಬೇಕು ಸುಖ ಸುಮ್ಮನೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಚೇರಿ ಅಲೆಯುವುದು ಬೇಡ ಅಂತಹ ಪಿಡಿಓಗಳು ಕಂಡು ಬಂದರೆ ಕೂಡಲೇ ಅಂತವರನ್ನು ಸೂಕ್ತ ಕ್ರಮ ಕೈಗಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಎಚ್ಚರಿಕೆ ನೀಡಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಪ್ರಗತಿ ಪರೀಶಿಲನಾ ವರದಿ ಸಭೆಯಲ್ಲಿ ಪಿಡಿಓಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಿಡಿಓಗಳು ಬೇಕಾದ ಗ್ರಾಮ ಪಂಚಾಯಿತಿಗೆ ಓಗಲು ಸದಸ್ಯರ ಗುಂಪು ಕೂಡಿಸಿ ಜಿಲ್ಲಾ, ತಾಲೂಕು ಪಂಚಾಯಿತಿಗೆ ಕಳಿಸುವುದು ಮಾಮೂಲು ಹಾಗಿದೆ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಿದರೆ ಗಡಿ ಗ್ರಾಮಗಳಿಗೆ ಹಾಕಲಾಗುವುದು ಮುಖ್ಯ ಅಧಿಕಾರಿಗಳಿಗೆ ಬಿಟ್ಟಿರುವ ವಿಷಯ ನೀವುಗಳು ಸುಖ ಸುಮ್ಮನೆ ಗುಂಪು ಕೂಡಿಸುವುದು ಬೇಡ ಇದು ಮತ್ತೆ ಮರುಕಳಿಸಿದರೆ ಸೂಕ್ರ ಕ್ರಮ ಜರುಗಿಸಲಾಗುವುದು ಎಂದು ಪಿಡಿಓಗಳಿಗೆ ವಾರ್ನಿಂಗ್ ಮಾಡಿದ್ದಾರೆ.
ಇನ್ನೂ ಇರುವ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ದಿ ಮಾಡುವುದು ಬಿಟ್ಟು ಅಡಿಷನಲ್ ಪಂಚಾಯಿತಿ ಹಾಕಿ ಕೊಡಿ ಎಂದು ಬರುತ್ತಿರಾ ಎಂದು ಗರಂ ಹಾದರು.
ಈ ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಿ ಪಿಡಿಓಯಾಗಿ ಮಾಡಲು ನೀವು ಅರ್ಹರಿದ್ದೀರಿ ನೀವು ಎನಾದರೂ ನಿಮ್ಮ ಚಾಣಕ್ಷತನ ಉಪಯೋಗಿ ಸದಸ್ಯರ ಗುಂಪು ಕಟ್ಟಿ ವಾಹನದ ವ್ಯವಸ್ಥೆ ಮಾಡಿ ಜಿಲ್ಲಾ ಪಂಚಾತಿಗೆ ಹಾಗೂ ತಾಲೂಕು ಪಂಚಾಯಿತಿಗೆ ಕಳಿಸವುದು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದು ಎಂದು ಎಚ್ಚರಿಕೆ ನೀಡಿದರು.
ದೇವರ ದಯೆಯಿಂದ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಕೆರೆಗಳು ತುಂಬಿವೆ ನಮಗೆ ಕುಡಿಯುವ ನೀರಿನ ಭವಣೆ ನೀಗಿದೆ ಎಂದರು.
ರೈತರು ಬೆಳೆದ ಬೆಳೆ ಕೂಡ ಕಟವಾಗಿದೆ ಆದ್ದರಿಂದ ಗ್ರಾಮೀಣ ಭಾಗದ ಜನರು ಉದ್ಯೋಗ ಹರಸಿ ಬಂದರೆ ಕೂಡಲೇ ಉದ್ಯೋಗ ನೀಡಲು ನರೇಗಾ ಯೋಜನೆಯಲ್ಲಿ ಕಾಮಗಾರಿ ಕಾಯ್ದಿರಿಸಿರಿ. ಇಂಜಿನಿಯಾರ್‌ಗಳು ಗ್ರಾಮ ಪಂಚಾಯಿತಿಗೆ ಬೇಟಿ ನೀಡುವ ದಿನವನ್ನು ಸೂಚನ ಫಲಕದಲ್ಲಿ ನಮೂದಿಸಬೇಕು ಎಂದರು.
ಇನ್ನೂ ಮನೆಯ ಜಾಗದ ಇಸ್ವತ್ತು ಪ್ರಕರಣಗಳಿ ತುಂಬಾ ಗಂಭಿರವಾಗಿ ಕೇಳಿ ಬರುತ್ತಿವೆ ಪಿಡಿಓಗಳು ನೆಪ ಹೇಳಿ ಸಾರ್ವಜನಿಕರನ್ನು ಕಳಿಸುವುದು ಬೇಡ ಪುಣ್ಯದ ಕೆಲಸ ಸಾರ್ವಜನಿಕರ ಕೆಲಸ ಮಾಡಿ, ಶೌಚಾಲಯಕ್ಕೆ ಪ್ರಮುಖ್ಯತೆ ನೀಡಿ, ಅರ್ಧಕ್ಕೆ ನಿಂತ ಮನೆಗಳಿಗೆ ಫಲಾನುಭವಿಗಳನ್ನು ವಿಚಾರಿಸಿ ಪೂರ್ಣಗೊಳಿಸಿ ಎಂದರು.
ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟ ಗ್ರಾಪಂ ಕಚೇರಿ ಸಿಬ್ಬಂದಿಗಳ ಪರಿಹಾರ ಮೊತ್ತವನ್ನು ನೀಡಲು ಜಿಲ್ಲಾ ಪಂಚಾಯತ್ ನಿರ್ವಹಣನಿಧಿ 10ಲಕ್ಷ, ತಾಪಂ 5ಲಕ್ಷ ಹಾಗೂ ಗ್ರಾಪಂ ವಾರ್ಷಿಕ ತೆರಿಗೆ ಆದಾರದ ಮೇಲೆ 50 ಸಾವಿರೂಗಳನ್ನು ಆಶ್ವಾಸನೆ ನಿಧಿಗೆ ಜಮ ಮಾಡ ಬೇಕಿತ್ತು
ಇದು ಸರಕಾರದ ಸುತ್ತೋಲೆಯಾಗಿರುವುದರಿಂದ ನಿಗಧಿತ ಸಮಯದೊಳಗೆ ಖಾತೆಗೆ ಜಮೆ ಮಾಡದಿದ್ದರೆ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಖರೀದಿ ಮಾಡಿದ ಸಾಮಾಗ್ರಿಗಳ ಬಿಲ್ ತನಿಖೆ ನಡೆಸಿ ಸೂಕ್ತ ಕ್ರಮ ಕೊಳ್ಳಲಾಗುವುದು ಎಂದು ಕಡ್ಡಕ್ಕಾಗಿ ಎಚ್ಚರಿಕೆ ನೀಡಿದರು.
ಯಾವುದೇ ಸಂದರ್ಭದಲ್ಲಿ ಗ್ರಾಪಂ ಕಚೇರಿಗೆ ಭೇಟಿ ನೀಡಿದಾಗ ಎಷ್ಟು ಬ್ಯಾಂಕ್ ಖಾತೆಗಳಿಗೆ, ಹಣ ಎಷ್ಟು ಖರ್ಚು ಮಾಡಿದ್ದೀರಿ ಎಂಬುದನ್ನು ತನಿಖೆ ನಡೆಸಲಾಗುವುದು. ಗ್ರಾಪಂ ಕಚೇರಿಯಲ್ಲಿ ವಿವಿಧ ಯೋಜನೆಯ ಎಷ್ಟು ಖಾತೆಗಳಿಗೆ ಹೇಗೆ ನಿರ್ವಹಣೆ ಮಾಡುತ್ತೀರಿ ಎಂದು ತಾಪಂ ಲೆಕ್ಕಾಧಿಕಾರಿಗೆ ಜಿಪಂ ಸಿಒ ಪ್ರಶ್ನೆಗೆ ಮೌನವಹಿಸಿದ ಅಧಿಕಾರಿಗೆ ಮಾಹಿತಿ ಇಲ್ಲದ ಮೇಲೆ ನೀವು ಹೇಗೆ ಕರ್ತವ್ಯ ನಿರ್ವಹಿಸುತ್ತೀರಿ ನಿಮ್ಮನ್ನು ಬೇರೆ ತಾಲೂಕು ಅಥವಾ ಖಚಾನೆಗೆ ವರ್ಗಾವಣೆ ಮಾಡಲಾಗುವುದು ಎಂದು ಕಿಡಿ ಕಾರಿದರು.
ನರೇಗಾ ಇಂಜಿನಿಯರ್‌ಗಳು ತಾಪಂ ಕಚೇರಿಯಲ್ಲಿರುವುದನ್ನು ಬಿಟ್ಟು ಗ್ರಾಪಂ ಕಚೇರಿಯಲ್ಲಿರಬೇಕು ಇರುವ 12 ಜನರು ಪ್ರತಿ ಎರಡು ಅಥವಾ ಮೂರು ಗ್ರಾಪಂ ಕಚೇರಿಗಳಿಗೆ ಕರ್ತವ್ಯದ ದಿನವನ್ನು ಸೂಚಿಸಿ ನಿಮ್ಮಹಾಜರಾತಿ ಇನ್ನು ಮುಂದೆ ಗ್ರಾಪಂ ಕಚೇರಿಯಲ್ಲಿ ಹಾಕಬೇಕು ಕರ್ತವ್ಯ ನಿರ್ವಹಿಸಿದರೆ ಮಾತ್ರ ವೇತನ ಎಂದು ತಿಳಿಸಿದರು.
ಹೊರಗುತ್ತಿಗೆ ನೌಕಕರರು ಪಿಡಿಒ ಹಾಗೂ ಮೇಲಾಧಿಕಾರಿಗಳ ಬಗ್ಗೆ ಇಲ್ಲ ಸಲ್ಲದ ದೂರು, ಆರೋಪಗಳನ್ನು ಮಾಡುವುದು ಕಂಡು ಬಂದಿದ್ದು ಅಂತಹ ಸಿಬ್ಬಂದಿಗಳಿಗೆ ಕಿತ್ತೊಗೆಯುವಂತೆ ತಿಳಿಸಿದರು.
ಗ್ರಾಪಂ ಕಚೇರಿಯ ಎಲ್ಲಾಖಾತೆಗಳನ್ನು ಪಂಚತAತ್ರ-2 ನಲ್ಲಿ ಅಳವಡಿಸ ಬೇಕು ಆದರೆ ಯಾವ ಪಿಡಿಒಗಳು ಅಳವಡಿಸದೆ ಇರುವ ಬಗ್ಗೆ ಗರಂ ಆದ ಸಿಇಒ ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಉಪಕಾರ್ಯದರ್ಶಿ ರಂಗನಾಥ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿ ಉದ್ಯೊಗ ಗುರಿತನ ಚೀಟಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸ ಬೇಕು ಕೆಲವು ಪಿಡಿಒಗಳು ಇನ್ನು ಪೂರ್ಣಗೊಳಿಸಿಲ್ಲವಾದ್ದರಿಂದ ಅವರ ಖಾತೆಗೆ ಕೂಲಿ ಹಣ ಜಮ ಆಗುತ್ತಿಲ್ಲ ನಿಮಗೆ ಸಂಬಳ ನಿಲ್ಲಿಸಿದರೆ ಸುಮ್ಮನಿರುತ್ತೀರೋ ಕೂಡಲೆ ಆಧಾರ್ ಲಿಂಕ್ ಮಾಡಿ ಅವರ ಖಾತೆಗೆ ಕೂಲಿ ಹಣ ಪಾವತಿಸುವಂತೆ ತಾಕೀತು ಮಾಡಿದರು.
ಸಭೆ ಪ್ರಾರಂಬ ಮುನ್ನ ಪಿಡಿಒ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಹಾಜರಾತಿ ಪರಿಶೀಲನೆ ನಡೆಸಿ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾಪಂ ಇಒಗೆ ಸೂಚನೆ ನೀಡಿದರು.
ಸಭೆಯಲ್ಲಿ ತಾಪಂ ಇಒ ಹೊನ್ನಯ್ಯ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ ಮಾಡಿ : ಪಿಡಿಓಗಳು ಬೇಕಾದ ಗ್ರಾಮ ಪಂಚಾಯಿತಿಗೆ ಓಗಲು ಸದಸ್ಯರ ಗುಂಪು ಕೂಡಿಸಿ ಜಿಲ್ಲಾ, ತಾಲೂಕು ಪಂಚಾಯಿತಿಗೆ ಕಳಿಸುವುದು ಮಾಮೂಲು ಹಾಗಿದೆ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಿದರೆ ಗಡಿ ಗ್ರಾಮಗಳಿಗೆ ಹಾಕಲಾಗುವುದು ಮುಖ್ಯ ಅಧಿಕಾರಿಗಳಿಗೆ ಬಿಟ್ಟಿರುವ ವಿಷಯ ನೀವುಗಳು ಸುಖ ಸುಮ್ಮನೆ ಗುಂಪು ಕೂಡಿಸುವುದು ಬೇಡ ಇದು ಮತ್ತೆ ಮರುಕಳಿಸಿದರೆ ಸೂಕ್ರ ಕ್ರಮ ಜರುಗಿಸಲಾಗುವುದು ಎಂದು ಪಿಡಿಓಗಳಿಗೆ ವಾರ್ನಿಂಗ್ ಮಾಡಿದ್ದಾರೆ.