ಕನ್ನಡ ಉಳಿವಿಗೆ ಕೆಆರ್‌ಎಸ್ ಪಕ್ಷದಿಂದ ಜಾಗೃತಿ : ತಾಲೂಕು ಅಧ್ಯಕ್ಷ ಮಾರುತಿ ಹೇಳಿಕೆ
ಚಳ್ಳಕೆರೆ : ಕನ್ನಡ ರಾಜೋತ್ಸವದ ಅಂಗವಾಗಿ ಕನ್ನಡ ಉಳಿಸು, ಬೆಳೆಸು ಎಂಬ ಪರಿಕ್ಷಲನೆಯಡಿಯಲ್ಲಿ ಈಡೀ ರಾಜ್ಯಾದ್ಯಾಂತ ಕರ್ನಾಟಕ ರಾಷ್ಟೀಯ ಪಕ್ಷ ಆಮ್ಮಿಕೊಂಡ ಕನ್ನಡ ಉಳಿವಿಗಾಗಿ ಜಾಥ ಕಟಿ ಬದ್ದವಾಗಿದೆ ಎಂದು ತಾಲೂಕು ಅಧ್ಯಕ್ಷ ಮಾರುತಿ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈಡೀ ರಾಜ್ಯದಲ್ಲಿ ಕನ್ನಡ ಉಳಿವಿಗೆ ರಾಜ್ಯಾಧ್ಯಾಕ್ಷರು ವಿನೂತನವಾದ ಕಾರ್ಯದ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಮೂಲಕ ಸಂಚರಿಸಿ ಕನ್ನಡದ ಉಳಿವಿಗೆ ಕಂಕಣ ಬದ್ದರಾಗುತ್ತಾರೆ, ಇನ್ನೂ ಮೊದಲಿಗೆ ಪ್ರಾರಂಭವಾದ ಜಾಗೃತಿ ಜಾಥ ಮಲೆ ಮಾಹದೇಶ್ವರ ಬೆಟ್ಟದಿಂದ ಸಾಗಿದ ಜಾಥ ನವೆಂಬರ್ 12 ರಂದು ಚಳ್ಳಕೆರೆ ತಾಲೂಕಿನ ತಳಕು ಗ್ರಾಮಕ್ಕೆ ಆಗಮಿಸಿವುದು ಆದ್ದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಎಲ್ಲಾ ಕನ್ನಡಭಿಮಾನಿಗಳು ಭಾಗವಹಿಸಿ ಕನ್ನಡದ ತೆರು ಮುಂದೆ ಸಾಗಿಸಬೇಕು ಎಂದು ಕರೆ ನೀಡಿದ್ದಾರೆ.
ಇನ್ನೂ ಜಿಲ್ಲಾ ಸಂಚಾಲಕ ನಗರಂಗೆರೆ ಮಹೇಶ್ ಮಾತನಾಡಿ, ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಡೆಯುವ ಈ ಜಾಥ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಹಾಗೂ ಚಳ್ಳಕೆರೆ, ಹಿರಿಯೂರು ಚಿತ್ರದುರ್ಗಕ್ಕೆ ಆಗಮಿಸಿ ಕನ್ನಡ ಜಾಗೃತಿ ಮೂಡಿಸಲಾಗುವುದು ಕನ್ನಡ ಒಗ್ಗೂಡುವಿಕೆಗೆ ಕನ್ನಡಭಿಮಾನಿಗಳ ಮನಸ್ಸು ಸೆಳೆಯಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಏಕಾಂತರೆಡ್ಡಿ, ಕಾರ್ಯದ್ಯಕ್ಷ ಬೋಜರಾಜು, ರೈತ ಸಂಘದ ಅದ್ಯಕ್ಷ ನಾಗರೆಡ್ಡಿ, ಯುವ ಘಟಕದ ಬಾಲರಾಜ್, ದರೇಶ್, ಜಾಲಣ್ಣ, ತಿಮ್ಮರಾಜು ಇತರರು ಪಾಲ್ಗೊಂಡಿದ್ದರು.