ಎಸ್ಟಿ ವಿರಾಟ್ ಸಮಾವೇಶಕ್ಕೆ ಭಾಗವಹಿಸುವಂತೆ ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಕರೆ
ಚಳ್ಳಕೆರೆ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಸಚಿವ ಬಿ.ಶ್ರೀರಾಮುಲು ರವರು ನವೆಂಬರ್ 20 ರಂದು ಭಾನುವಾರದಂದು ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಎಸ್ ಟಿ ವಿರಾಟ್ ಸಮಾವೇಶಕ್ಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಹೇಳಿದ್ದಾರೆ.
ಎಸ್ಪಿ ವಿರಾಟ್ ಸಮಾವೇಶದ ಪೂರ್ವಭಾವಿ ಸಭೆಯ ಅಂಗವಾಗಿ ಗೌರಸಮುದ್ರ ತಳಕು ಹೋಬಳಿಯ ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿದ ಅವರು ಮೊಳಕಾಲ್ಮೂರು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳು ಸಾರ್ವಜನಿಕರು ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈ.ರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಮಂಡಲ ಕಾರ್ಯದರ್ಶಿಗಳಾದ ಎಚ್ವಿ.ಪ್ರಕಾಶ್, ಎಸ್ಟಿ.ನಾಗರಾಜ್ ಹಿರೇಹಳ್ಳಿ, ಎಸ್ಟಿ ಮೂರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ, ಇನ್ನು ವಿವಿಧ ಗ್ರಾಮ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು