ಮತದಾರರ ಕರಡು ಪ್ರತಿ ಜಾಗೃತಿಗೆ ನಾಳೆ ಕಾಲ್ನಡಿಗೆ ಜಾಥ : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ
ಚಳ್ಳಕೆರೆ : ತಾಲ್ಲೂಕು ಹಂತದಲ್ಲಿ ಮತದಾರರ ಪಟ್ಟಿಯ ಕರಡು ಪ್ರತಿಯಲ್ಲಿ
ತಮ್ಮ ಹೆಸರು ಇದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು
ಕಾಲ್ನಡಿಗೆ ಮತ್ತು ರ್ಯಾಲಿಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ
ಜಿಲ್ಲಾಧಿಕಾರಿಗಳ ಆದೇಶದಂತೆ
ತಾಲ್ಲೂಕು ಹಂತದಲ್ಲಿ
ಮತದಾರರ ಪಟ್ಟಿಯ ಕರಡು ಪ್ರತಿಯಲ್ಲಿ ತಮ್ಮ ಹೆಸರು ಇದೆ ಎಂಬುದನ್ನು ಸಾರ್ವಜನಿಕರಿಗೆ
ತಿಳಿಸಲು ಕಾಲ್ನಡಿಗೆ ಮತ್ತು ರ್ಯಾಲಿಗಳ ಮುಖಾಂತರ ನ.9 ರಂದು ಜಾಗೃತಿ ಮೂಡಿಸಲಾಗುವುದು
ರಾಲಿಯನ್ನು ವಾಲ್ಮೀಕಿ ವೃತ್ತದಿಂದ ಆರಂಭಿಸಿ
ನೆಹರು ವೃತ್ತವನ್ನು ಸುತ್ತುವರಿದು ಮರಳಿ ಅದೇ ವಾಲ್ಮೀಕಿ ವೃತ್ತವನ್ನು ಸೇರಿ ಕರಡು ಮತದಾರರ
ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.