ತೆಂಗು ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ : ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಮನವಿ
ಚಳ್ಳಕೆರೆ : 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತರಿ ಯೋಜನೆಯಡಿ ನೀರಾವರಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತಿಸಣ್ಣ ರೈತರು
ಅಥವಾ ಬಿಪಿಎಲ್ ಕಾರ್ಡ್‌ದಾರರು ಈ ಯೋಜನೆಯಡಿ ತೆಂಗು ಪ್ರದೇಶ ವಿಸ್ತರಣೆ (1 ಎಕರೆ ಯಿಂದ 5
ಎಕರೆಯವರೆಗೆ ತೆಂಗು ಸಸಿ ನಾಟಿ ಮಾಡಿಕೊಳ್ಳಲು ಅವಕಾಶವಿದೆ) ಕೈಗೊಳ್ಳಲು ಇಲಾಖೆಯ ಅಧಿಕಾರಿಗಳನ್ನು
ಸಂಪರ್ಕಿಸಲು ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರತಿ ಎಕರೆಗೆ 40 ತೆಂಗು ಸಸಿಗಳನ್ನು ನಾಟಿ ಮಾಡಬಹುದಾಗಿದ್ದು, ಇಲಾಖೆಯಿಂದಲೇ ಉತ್ತಮ ಗುಣಮಟ್ಟದ
ತೆಂಗಿನ ಸಸಿಗಳನ್ನು ನೀಡಲಾಗುವುದು,
ಅಲ್ಲದೇ ನರೇಗಾದಡಿಯಲ್ಲಿ ಪ್ರತಿ ಎಕರೆಗೆ ರೂ.15450/- (50 ಮಾನವ
ದಿನಗಳು) ಹಣ ಪಾವತಿಮಾಡಲಾಗುವುದು ಎಂದಿದ್ದಾರೆ
ಆದ್ದರಿಂದ ತಾಲೂಕಿನ ಪ್ರತಿಯೊಬ್ಬ ಅರ್ಹ ರೈತರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದ್ದಾರೆ.