ಸ್ನೇಹದಿಂದ ಬಿಜೆಪಿಗೆ ಬಲಿಯಾದÀ ಗೋವಿಂದರೆಡ್ಡಿ :
ಒಂದೇ ದಿನದಲ್ಲಿ ಯೂಟರ್ನ್ ಒಡೆದು ಕಾಂಗ್ರೇಸ್‌ಗೆ ಸೆರ್ಪಡೆ
ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಸುನಿತಾ ಗೋವಿಂದ ರೆಡ್ಡಿ ರಂಗವನಹಳ್ಳಿ ಇವರು ಕಾಂಗ್ರೆಸ್ಸಿನ ನಿಷ್ಠವಂತ ಕಾರ್ಯಕರ್ತರಾಗಿದ್ದು ಇವರಿಗೆ ವಿನಾಕಾರಣ ಚಳ್ಳಕೆರೆ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ ಬಲವಂತವಾಗಿ ಬಿಜೆಪಿ ಬಾವುಟ ಕೊಟ್ಟು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿರುವುದು ಖಂಡನೀಯ ಎಂದು ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಕಿಡಿಕಾರಿದ್ದಾರೆ.
ನಗರದ ಶಾಸಕರ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜಕೀಯ ಪ್ರೇರಿತವಾಗಿ ಈ ತೆರನಾದ ಪಕ್ಷ ಸಂಘಟನೆ ಮಾಡುವುದು ತರವಲ್ಲ ಸ್ವಯಂ ಪ್ರೇರಿತವಾಗಿ ಪಕ್ಷಕ್ಕೆ ದುಡಿಯುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿ, ಆದು ಬಿಟ್ಟು ಬಲವಂತಾಗಿ ಸೇರಿಸಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ಪಕ್ಷದ ಅಧ್ಯಕ್ಷರ ನಿಲುವಿಗೆ ಕೆಂಡ ಕಾರಿದರು.
ಇನ್ನೂ ಪಕ್ಷ ಸೇರರ್ಪಡೆ ಗೊಂದಲಕ್ಕೆ ಕಾರಣರಾದ ಗೋವಿಂದ ರೆಡ್ಡಿ ಕುದ್ದಾಂಗಿ ಮಾದ್ಯಮದೊಂದಿಗೆ ಮಾತನಾಡಿ, ಸೂರನಹಳ್ಳಿ ಶ್ರೀನಿವಾಸ್ ಮೊದಲು ಕಾಂಗ್ರೇಸ್ ಮೂಲದವರು ಆವರು ಈಗ ಅಧಿಕಾರ ಸಿಕ್ಕೆದೆಯಂದು ಬಿಜೆಪಿ ಪಕ್ಷಕ್ಕೆ ಹೋಗಿ ಎಲ್ಲಾರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಧವಾಂತದಲ್ಲಿ ಇದ್ದಾರೆ ಆದರೆ ನಾನು ಒಬ್ಬ ಸ್ನೇಹಿತನಾಗಿ ಜೊತೆಗೆ ಹೋಗಿದ್ದು ಹೊರತು ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾಗಿಲ್ಲ, ಆದರೆ ವಿನಾ ಕಾರಣ ಸೋಶಿಯಲ್ ಮಿಡಿಯಾದಲ್ಲಿ ನನ್ನ ಕಾಗ್ರೇಸ್ ತೊರೆದು ಬಿಜೆಪಿಗೆ ಸೇರಿದ್ದಾರೆ ಎನ್ನುವುದು ಶುದ್ದ ಸುಳ್ಳು, ಇದರಿಂದ ಗೊಂದಲ ಬೇಡ ನಾನು ಮೂಲತಃ ಕಾಂಗ್ರೇಸಿಗ ಈಗಲೂ ಕಾಂಗ್ರೇಸ್ ಪಕ್ಷದ ಸಿದ್ದಾಂತದಲ್ಲಿ ನಡೆಯುತ್ತಿದ್ದೆನೆ ಶಾಸಕರ ತತ್ವ ಸಿದ್ದಾಂತ ಮೆಚ್ಚಿದ್ದೆನೆ ಎಂದು ಬಿಜೆಪಿ ಮಂಡಲ ಅಧ್ಯಕ್ಷರ ವಿರುದ್ದ ಆಕ್ರೊಶ ವ್ಯಕ್ತಪಡಿಸಿರು.
ಇನ್ನೂ ಬಿಜೆಪಿ ತೊರೆದು ಕಾಂಗ್ರೇಸ್ ಬಾವುಟ ಹಿಡಿದ ನುಂಕೇಶ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಟಿ ರಘುಮೂರ್ತಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಈಡೀ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ ನಾನು ಕೂಡ ಈ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು
ಇದೇ ಸಂಧರ್ಭದಲ್ಲಿ ನುಂಕೇಶ್ ಗೊರಲ್ಕಟ್ಟೆ ಇವರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಇದೇ ವೇಳೆ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ ತಿಪ್ಪೇಸ್ವಾಮಿ, ಕರಿಕೆರೆ ರಾಜಣ್ಣ, ದೊಡ್ಡ ರಂಗಪ್ಪ, ಮಂಜುನಾಥ್ ರಂಗವನಹಳ್ಳಿ ಚನ್ನವೀರಪ್ಪ, ಓಬಳೇಶ್ ಮತ್ತಿತರ ಉಪಸ್ಥಿತರಿದ್ದರು