ಚಳ್ಳಕೆರೆ : ಜಾನುವಾರುಗಳಿಗೆ ಚರ್ಮ ಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ
ಆದ್ದರಿಂದ ಜಾನುವಾರು ಇರುವ ಪ್ರತಿಯೊಬ್ಬ ರೈತರು ಕೂಡ ತಪ್ಪದೆ ಲಸಿಕೆ ಹಾಕಿಸಿ ಎಂದು ಪಶು ಸಂಗೋಪನೆ ಇಲಾಖೆ ತಾಲೂಕು ಸಹಯಾಕ ನಿರ್ದೇಶಕ ಡಾ.ರೇವಣ್ಣ ಹೇಳಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿದ ಅವರು ಈಡೀ ತಾಲೂಕಿನಲ್ಲಿ ಚರ್ಮ ಗಂಡು ರೋಗ ಹರಡುವಿಕೆ ನಿಯಂತ್ರಣಕ್ಕೆ ಬಾರದಂತಾಗಿದ್ದು, ಬಿಡಾಡಿ ದನಗಳು ಹಾವಳಿಯಿಂದ ಈ ರೋಗ ನಿಯಂತ್ರಣಕ್ಕೆ ಬಾರದೆ ಹೆಚ್ಚಾಗುತ್ತದೆ ಆದರೆ ಈಗಾಗಲೇ ಹಲವು ಬಿಡಾಡಿ ದನಗಳಿಗೆ ಲಸಿಕೆ ಹಾಕಲಾಗಿದೆ ಆದರೆ ಇನ್ನೂ ಹೆಚ್ಚಿನದಾಗಿ ರಸ್ತೆಯಲ್ಲಿ ತಿರುಗಾಡುವ ಜಾನುವಾರಗಳು ಹಿಡಿತಕ್ಕೆ ಸಿಗದೆ
ಜಾನುವಾರುಗಳು
ಚರ್ಮ ಗಂಟು ರೋಗ ಬಾಧೆಗೆ ತುತ್ತಾಗಿ ಬಳಲುತ್ತಿವೆ.
ಈಗಾಗಲೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚರ್ಮ ಗಂಟು ರೋಗ ಬಾಧೆಗೆ ಸಾಕಷ್ಟು ಜಾನುವಾರುಗಳು ಗುಣಮುಕವಾರದೆ ಇನ್ನು ಕೆಲವು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಪ್ರಕರಣಗಳು ಕಣ್ಣು ಮುಂದೆ ಇವೆ ಎಂದರು.