ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆ ಇ ಒ ಜಿ ಕೆ ಹೋನಯ್ಯ
ನಾಯಕನಹಟ್ಟಿ:: ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆಂದು ಇ ಒ ಹೊನ್ನಯ್ಯ ಹೇಳಿದ್ದಾರೆ.
ಅವರು ನೇರಲಗುಂಟೆ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಸಿದ ಬೆನ್ನಲಿ ಸರ್ವ ಸದಸ್ಯರು ಬೆಂಬಲವನ್ನ ಸೂಚಿಸಿ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆ ಮಾಡಲಾಯಿತು.
ತೆರವಾಗಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಪಿ ಈರಣ್ಣ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು. ಪ್ರಯುಕ್ತ ಮಂಗಳವಾರ ಮತದಾನ ನಡೆಯ ಸರ್ವ ಸದಸ್ಯರು ಒಮ್ಮತ ಬೆಂಬಲವನ್ನು ನೀಡಿ ನೂತನ ಅಧ್ಯಕ್ಷರಾಗಿ ಬಿ ಈರಣ್ಣರವರ ಆಯ್ಕೆ ಮಾಡಲಾಗಿದೆ ಎಂದು ಇ ಒ ಹೊನ್ನಯ್ಯ ತಿಳಿಸಿದ್ದಾರೆ.
ಈ ವೇಳೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹಾಗೂ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಾ. ಕಾಟಂಲಿಂಗಯ್ಯ ನೂತನ ಅಧ್ಯಕ್ಷ ಪಿ ಈರಣ್ಣ ರವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಿನಾಗವೇಣಿ ,ಸದಸ್ಯರಾದ ಆರ್ ಚಂದ್ರಶೇಖರ್, ಗೊಂಚಿ ಗಾರ್ ಯಾರ್ರಯ್ಯ, ಮಾಜಿ ಅಧ್ಯಕ್ಷರಾದ ಶಾಂತಮ್ಮ ರಮೇಶ್ ಬಾಬು ,ಗೌರಣ್ಣ, ಸುಷ್ಮಾ, ದುರುಗಮ್ಮ ನಾಗಭೂಷಣ್, ದುರುಗಮ್ಮ ರುದ್ರಮುನಿಯಪ್ಪ, ಚಳ್ಳಕೆರೆಮ್ಮ, ಕರಿಯಮ್ಮ, ನೇರಲಗುಂಟೆ ಗ್ರಾಮದ ಮುಖಂಡರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಮುಖಂಡರು ಉಪಸ್ಥಿತರಿದ್ದರು.