ಚಳ್ಳಕೆರೆ :
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಆಮ್ಮಿಕೊಂಡ ರೈತರ ಜಮೀನಿಲ್ಲಿರುವ ಫಲವತ್ತಾದ ಮಣ್ಣು ಅಕ್ರಮವಾಗಿ ರಸ್ತೆ ಅಭಿವೃದ್ಧಿಗೆ ಸಾಗಾಟ ಮಾಡಲು ಅನುಮತಿ ನೀಡಿರುವುದನ್ನು ಖಂಡಿಸಿ ಈ ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರದೇವರಹಟ್ಟಿ ಸಮೀಪ ಸೋಮಲಕೆರೆ ವ್ಯಾಪ್ತಿಯ ಸರ್ವೆ ನಂಬರ್ ೭೫, ೭೬ ರಲ್ಲಿ ಸರಕಾರಿ ಗೋಮಾಳದಲ್ಲಿ ಸುಮಾರು 40 ವರ್ಷಗಳ ಹಿಂದೆ 11 ಜನ ರೈತರಿಗೆ ಸುಮಾರು 41 ಎಕರೆ ಮಂಜುರಾತಿ ನೀಡಿದ್ದರು ರೈತರು ಉಳುಮೆ ಮಾಡದೆ ಇರುವುರಿಂದ ಸ್ಥಳೀಯ ಗ್ರಾಮಪಂಚಾಯತ್ ಹಾಗೂ ತಹಶೀಲ್ದಾರ್ ಇವರಿಂದ ಮಾಹಿತಿ ಪಡೆಯದೆ ರಸ್ತೆ ಅಭಿವೃದ್ದಿಗೆ ಪಿಎಸ್‌ಸಿ ಕಂಪನಿಯರಿಗೆ ಮಣ್ಣು ಸಾಗಾಟಕ್ಕೆ ಜಿಲ್ಲಾಡಳಿತ ಪರವಾನಿಗೆ ನೀಡಿದೆ.
ರೈತರ ಜಮೀನಿನಲ್ಲಿ 3 ಅಡಿಗಿಂತ ಆಳವಾಗಿ ತೆಗೆಯಬಾರದು ಸಮತಟ್ಟು ಮಾಡಬೇಕೆಂಬ ನಿಯಮಗಳಿಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 8 ರಿಂದ 10 ಅಡಿಯವರಗೆ ಮಣ್ಣು ತುಂಬಲಾಗಿದೆ.
ಅಕ್ರಮ ಮಣ್ಣು ಸಾಗಟ ರದ್ದು ಪಡಿಸುವಂತೆ ಮನವಿ ನೀಡಿದ್ದರೂ ಸಹ ರೈತ ಸಂಘದ ಮನವಿ ದಿಕ್ಕರಿಸಿ ಮಂಗಳವಾರದಿAದ ಮತ್ತೆ ಪಿಎನ್‌ಸಿ ಕಂಪನಿಯವರು ಮಣ್ಣು ತುಂಬುತ್ತಿರುವುದನ್ನು ನಿಲ್ಲಿಸುವತನಕ ಸ್ಥಳದಲ್ಲೇ ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದರು.,
ಸರಕಾರ ರೈತರಿಗೆ ಬಗರ್ ಹುಕುಂ ಸಮಿತಿಯಲ್ಲಿ ಉಳುಮೆ ಮಾಡಿಕೊಂಡು ಜೀವನಸಾಗಿಲು ಭೂಮಿ ಮಂಜುರಾತಿ ನೀಡಿದ್ದು ರೈತರು ಉಳುಮೆ ಮಾಡದೆ ರಸ್ತೆ ಅಭಿವೃದ್ಧಿಗೆ ಮಣ್ಣು ಸಾಗಾಟ ಮಾಡಲು ನೀಡಿದ್ದಾರೆ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮರ್ ಆರೋಪಿಸಿದರು.
ರೈತರ ಬೆಳೆಗಳ ಮೇಲೆ ದೂಳು ಕುಳಿತು ಬೆಳೆ ಹಾನಿ ಹಾಗೂ ಈ ಭಾಗದ ಗ್ರಾಮೀಣ ಭಾಗದ ರಸ್ತೆಗಳು ಕಿತ್ತುಹೋಗಿ ಗುಂಡಿಗಳು ಇದರಿಂದ ಗ್ರಾಮೀಣ ಜನರು ಸಂಚರಿಸಲು ಕಷ್ಟಕರವಾಗಿದೆ ಕೂಡಲೆ ರೈತರ ಜಮೀನಿನಲ್ಲಿ ಫಲವತ್ತಾದ ಮಣ್ಣು ಸಾಗಾಟ ಮಾಡಲು ನೀಡಿ ಅನುಮತಿಯನ್ನು ಹಿಂಪಡೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ಮೂರ್ತಿ, ರೈತ ಮುಖಂಡರಾದ ವೀರೇಶ್, ಶಿವಣ್ಣ ದೇವರಹಳ್ಳಿ, ರಾಜಣ್ಣ, ಚಂದ್ರಣ್ಣ ಸೇರಿದಂತೆ ಇತರರಿದ್ದರು