ರಾಮಸಾಗರ ಗ್ರಾಮದಲ್ಲಿ ಗಟ್ಟಿ ಮುತ್ತಿನಾಯಕ ಮ್ಯಾಸಬೇಡ ಸಮುದಾಯದಿಂದ ದೇವರ ಎತ್ತುಗಳ ವಿಶೇಷ ಉತ್ಸವ

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯದ ಸಂಭ್ರಮ ತಲತಲಾಂತರಗಳಿಂದ ಆಚರಿಸಿಕೊಂಡ ಬಂದ ಪದ್ಧತಿ
ಈ ಉತ್ಸವ ಸಾಂಪ್ರದಾಯಿಕ ದೇವರ ಎತ್ತುಗಳ ಭವ್ಯ ಮೆರವಣಿಗೆ ರಾಮಸಾಗರದ ಶ್ರೀ ಗಾದ್ರಿ ಪಾಲನಾಯಕ ದೇವಸ್ಥಾನದ ಆವರಣದಲ್ಲಿ ಬುಡಕಟ್ಟು ಸಂಪ್ರದಾಯದಂತೆ ಧೂಳಿ ಹಬ್ಬದ ಉತ್ಸವದಲ್ಲಿ ದೇವರ ಎತ್ತುಗಳ ದರ್ಶನಕ್ಕೆ ಸೇರಿದ ಭಕ್ತ ಗಣ
ಹೌದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿಯ ಪ್ರತಿವರ್ಷದಂತೆ ಗಟ್ಟಿಮುತ್ತಿ ನಾಯಕ ವಂಶಸ್ಥರು ವಿಶೇಷವಾಗಿ ಶ್ರೀ ಗಾದಿ ಪಾಲನಾಯಕ ದೇವಸ್ಥಾನದ ಗಟ್ಟಿಮುತ್ತಿನಾಯಕ ವಂಶಸ್ಥರಾದ ರಾಮಸಾಗರ ಚೌಳಕೆರೆ ಸೂರಮನಹಳ್ಳಿ ಹಾಗೂ ಗುಡುಕಟ್ಟಿಗೆ ಸೇರಿದ ಅಣ್ಣ-ತಮ್ಮಂದಿರು ಸೇರಿ ಧೂಳಿ ಹಬ್ಬವನ್ನು ಧೂಳಿ ಹಬ್ಬ ಉತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.
ಗ್ರಾಮದ ಆರಾಧ್ಯ ದೈವ ಶ್ರೀ ಗಾದಿ ಪಾಲನಾಯಕ ದೇವರಿಗೆ ಪೂಜಿ ಸಲ್ಲಿಸಿ ಬಳಿಕ ಸಂಪ್ರದಾಯದಂತೆ ನೂರಕ್ಕೂ ಹೆಚ್ಚು ದೇವರ ಎತ್ತುಗಳ ಕರೆತಂದು ಪೂಜೆ ನೈವೇದ್ಯ ಅರ್ಪಿಸಿ ಈ ರೀತಿ ಮಾಡಿದರೆ ನಾಡು ರೋಗರುಜನೆಗಳಿಂದ ಮುಕ್ತವಾಗಿ ಸಮೃದ್ಧಿ ಮಳೆ ಬೆಳೆ ಕೂಡಿರುತ್ತೆ ಎಂಬ ಗಟ್ಟಿಮುತ್ತಿ ನಾಯಕ ವಂಶಸ್ಥರ ನಂಬಿಕೆ ದ್ವಾಪರ ಯುಗದ ಶ್ರೀ ಕೃಷ್ಣನಿಗೆ ಮತ್ತು ಮ್ಯಾಸಬೇಡ ಕುಲದ ಬುಡಕಟ್ಟು ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ ಜಾನುವಾರುಗಳು ಅದರಲ್ಲಿ ಗೋವುಗಳಿಗೆ ಆಗ್ರ ಸ್ಥಾನವಿದೆ ಮ್ಯಾಸಬೇಡ ಕುಲದ ಬುಡಕಟ್ಟು ಸಂಸ್ಕೃತಿಯಲ್ಲಿಯೂ ಕೂಡ ದೇವರ ಎತ್ತುಗಳಿಗೆ ವಿಶೇಷ ಸ್ಥಾನವಿದೆ ಶ್ರೀ ಕೃಷ್ಣನು ಆದರ್ಶಗಳು ಮತ್ತು ಆಚರಣೆಗಳನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ಪ್ರತಿಬಿಂಬಿಸಲಾಗಿದೆ ಹಾಗಾಗಿ ಬದುಕಿನ ಅಂಧಕಾರವನ್ನು ತೊರೆದು ಬೆಳಕಿನ ಕಡೆಗೆ ಮುಖ ಮಾಡುವಂತೆ ಈ ಒಂದು ಆಚರಣೆಯಲ್ಲಿ ಬಿಟ್ಟರೆ ದಕ್ಷಿಣ ಭಾರತದಲ್ಲಿ ಇಲ್ಲ ಹಾಗಾಗಿ ಈ ದೈವಿಕ ಪರಂಪರೆ ಮತ್ತು ಸಾಂಸ್ಕೃತಿಕ ಆಚರಣೆ ಉಳಿಸಿಕೊಂಡು ಹೋಗುವಂತೆ ಜವಾಬ್ದಾರಿ ಇಂದಿನ ಪೀಳಿಗೆಗೆ ಅಗತ್ಯವಾಗಿದೆ ಇನ್ನು ಶ್ರೀ ಗಾದ್ರಿಪಾಲ ನಾಯಕ ಸ್ವಾಮಿ ಅನ್ನದಾಸೋಹ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ರಾಮಸಾಗರ ಚೌಳಕೆರೆ ಸೂರಮ್ಮನಹಳ್ಳಿ ಗಟ್ಟಿ ಮುತ್ತಿನಾಯಕ ವಂಶಸ್ಥರು ಹಾಗೂ ಅಣ್ಣತಮ್ಮಂದಿರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!