ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಭಿವೃದ್ಧಿಹೊಂದಿ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ
ಚಳ್ಳಕೆರೆ : ಬುಡಕಟ್ಟು ಧಾರ್ಮಿಕ ಆಚರಣೆಗಳ ಜೊತೆ ವೈಚಾರಿಕವಾದ ಸಾಮಾಜಿಕ ಬದಲಾವಣೆ ಮೂಲಕ ಜನಾಂಗವು ಹೊಸ ಪರಿವರ್ತನೆಯಾಗುವ ಅವಶ್ಯಕತೆ ಇದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು
ಅವರು ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಬೊಗನಹಳ್ಳಿ ಗ್ರಾಮದಲ್ಲಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳಿಗೆ ಪೂಜೆ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ
ಈ ತಾಲೂಕಿನಲ್ಲಿ ಬುಡಕಟ್ಟು ಸಂಸ್ಕೃತಿ ಇರುವಂತ ಗ್ರಾಮಗಳಲ್ಲಿ ಬಹುತೇಕ ಶಾಂತಿ ಮತ್ತು ಸಾಮರಸ್ಯ ನೆಲೆಸಿದೆ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಹೊಸ ಆಯಾಮದಲ್ಲಿ ಈ ಜನ ಜೀವನವನ್ನು ಬೆಸಿಯಬೇಕಾಗಿದೆ.
ಈ ಭಾಗದ ಹೆಚ್ಚು ಹೆಚ್ಚು ರೈತರು ಈ ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯಬೇಕಾಗಿದೆ ಯಾವುದೇ ಕಾರಣಕ್ಕೂ ಪ್ರತಿ ಕುಟುಂಬದಲ್ಲಿ ಯಾವುದೇ ಮಗುವನ್ನು ಶಾಲೆಯಿಂದ ಹೊರಗೆ ಉಳಿಯುವಂತೆ ಮಾಡಕೂಡದು
ಪ್ರತಿಯೊಂದು ಮಗುವಿಗೂ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಶೈಕ್ಷಣಿಕ ನೆಲೆಗಟ್ಟು ಹೆಚ್ಚಾದಂತ ಸ್ವಾಭಿಮಾನದ ಮೊಳಕೆ ಹೊಡೆಯುತ್ತದೆ ಆಗ ಸ್ವಾವಲಂಬಿಗಳಾಗುತ್ತೀರಿ
ಇದಕ್ಕೆಲ್ಲ ಡಾಕ್ಟರ್ ಬಿಆರ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಒಂದೇ ಮೂಲ ಮಂತ್ರವಾಗಬೇಕು ಎಂದು ಮನವಿ ಮಾಡಿದರು.
ಇನ್ನೂ ಬುಡಕಟ್ಟು ಸಂಸ್ಕೃತಿಯಂತೆ ತಹಸಿಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯನ್ನು ಕಂಬಳಿಯ ಮೇಲೆ ಕೂರಿಸಿ ಸಂಪ್ರದಾಯವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಹ್ಲಾದ್, ಮತ್ತು ಪೆದ್ದಗಳು , ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು