ಚಳ್ಳಕೆರೆ : ವಾಲ್ಮೀಕಿ ಜಯಂತಿಗೆ ಕ್ಷಣ ಗಣನೆ : ರಾಜಕೀಯ ಪ್ರೇರಿತ ಜಯಂತಿ ಆಗುತ್ತಾ ಈ ಬಾರಿ..??
ಚಳ್ಳಕೆರೆ : ಚುನಾವಣೆ ವರ್ಷ ಈ ಬಾರಿ ಆಗಿರುವುದರಿಂದ ವಿಶೇಷವಾಗಿ ಇನ್ನೂ ಚುನಾವಣೆ ಆರು ತಿಂಗಳು ಬಾಕಿ ಇರುವಾಗಲೇ ನಗರದ ಪ್ರಮುಖ ಬೀದಿಗಳಲ್ಲಿ ರಾಜಕೀಯ ಗಣ್ಯ ವ್ಯಕ್ತಿಗಳ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ,
ಅದೇ ರೀತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಬ್ಯಾನರ್ ಗಳು ರಾರಾಜಿಸುತ್ತಿವೆ ಆದರೆ ಜೆಡಿಎಸ್ ಪಕ್ಷದ ಮುಖಂಡರ ಪ್ಲೆಕ್ಸ್ ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತವೆ.
ನಗರದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಗಳು ಫ್ಲೆಕ್ಸ್, ಬ್ಯಾನರ್ ಹಾಕಿಸುವ ಮೂಲಕ ಸಮನ್ವಯ ಕಾಯ್ದುಕೊಂಡಿದ್ದಾರೆ, ಇನ್ನೂ ಕೊನೆಯ ಸ್ಥಾನದಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳು ಕಾಣಸಿಗುತ್ತಿವೆ,
ಒಟ್ಟಾರೆ ರಾಜಕೀಯ ಪ್ರೇರಿತ ಬ್ಯಾನರ್ಗಳ ಒಳಗೊಂಡಂತೆ ಈ ಬಾರಿ ವಾಲ್ಮೀಕಿ ಜಯಂತಿಗೆ ಪ್ಲೆಕ್ಸ್ ಬ್ಯಾನರ್ ಗಳು ಕಳೆಗಟ್ಟಿವೆ
ಒಟ್ಟಾರೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರ ವಾಗಿರುವುದರಿಂದ ಅದರಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಹೊರತು ಪಡಿಸಿದರೆ ಮತ್ತೆ ಬಿಜೆಪಿ ಪಕ್ಷದಲ್ಲಿ ಯಾವುದೇ ಆಕಾಂಕ್ಷಿಯನ್ನು ಇನ್ನೂ ಕಣಕ್ಕೆಳಿಸದೆ ಇರುವುದರಿಂದ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿ ಪ್ಲೆಕ್ಸ್ , ಬ್ಯಾನರ್ ಗಳಲ್ಲಿ ಪೋಟೋಗಳು ಹೆಚ್ಚಿನದಾಗಿ ಕಾಣಸಿಗುತ್ತವೆ
ಇನ್ನೂ ಜೆಡಿಎಸ್ ಪಕ್ಷದ ನಿಕಟಪೂರ್ವ ಅಭ್ಯರ್ಥಿ ಎಂ.ರವೀಶ್ ಈ ಬಾರಿ ವಾಲ್ಮೀಕಿ ಜಯಂತಿಯ ಬ್ಯಾನರ್ ಗಳಲ್ಲಿ ಅಷ್ಟಾಗಿ ಕಾಣಸಿಗುತ್ತಿಲ್ಲ, ಈಗೇ ಚುನಾವಣೆ ಆರು ತಿಂಗಳು ಬಾಕಿ ಇರುವಾಗಲೇ ರಾಜಕೀಯ ರಂಗೇರಿ ವಾಲ್ಮೀಕಿ ಜಯಂತಿ ಸಾಕ್ಷಿಕರಿಸುತ್ತಿದೆ.
ಇನ್ನೂ ನಾಯಕ ಸಮುದಾಯದಿಂದ ಆಯೋಜಿಸಿದ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಿದ ವಾಲ್ಮೀಕಿ ಪುತ್ತಳಿಗೆ ಈ ಬಾರಿ ವಿಶೇಷವಾಗಿ ಹೂವಿನ ಅಲಂಕಾರ ಮಾಡುವ ಮೂಲಕ ವಿಜೃಂಭಣೆ ವಾಲ್ಮೀಕಿ ಜಯಂತಿಗೆ ಶುಭ ಕೋರಿದ್ದಾರೆ.
ಇನ್ನೂ ನಾಯಕ ಸಮುದಾಯದ ಮುಖಂಡರು ಒಳಗೊಂಡಂತೆ ವಿವಿಧ ಸಮುದಾಯ ಸಂಘಟಕರು, ವಿವಿಧ ರಾಜಕೀಯ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ,
ಇನ್ನು ಸ್ಥಳೀಯ ಕ್ಷೇತ್ರದ ಶಾಸಕ.ಟಿ.ರಘುಮೂರ್ತಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಒಳಗೊಂಡಂತೆ ಸಾವಿರಾರು ಸಂಖ್ಯೆಯಲ್ಲಿ ಸುಮಾರು ನಾಲ್ಕು ಡಿಜೆಗಳ ಸದ್ದಿಗೆ ಹೆಜ್ಜೆ ಹಾಕಲಿದ್ದಾರೆ,
ಇನ್ನು ಡಿಜೆ ಸದ್ದಿಗೆ ಮಹಿಳಾ ಮಣಿಗಳು ಕೂಡ ಹೆಜ್ಜೆ ಹಾಕಲು ಸಕಲ ಸಿದ್ಧತೆಯಲ್ಲಿದ್ದಾರೆ