ಗೊಲ್ಲಾಳ್ಳೇಶ್ವರಿದೇವಿ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಗೊಲ್ಲ ಸಮುದಾಯದವರು ತಮ್ಮ ಪೂರ್ವಜರ ನಂಬಿಕೆ ಮತ್ತು ಸಂಪ್ರದಾಯಗಳನ್ನು ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಹ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರು
ಗ್ರಾಮದ ಕರಡೇರಗೊಲ್ಲರ ಆರಾದ್ಯ ದೈವಗಳಾದ ಶ್ರೀ ವೀರಕರಿಯಣ್ಣಸ್ವಾಮಿ, ಮತ್ತು ಶ್ರೀ ಗೊಲ್ಲಾಳ್ಳೇಶ್ವರಿದೇವಿ ದೇವರುಗಳ ದೇವಸ್ಥಾನ ನಿರ್ಮಾಣದ ಗುದ್ದಲಿ ಪೂಜೆ ಹಾಗೂ ಹಾಲು ತುಪ್ಪದೊಂದಿಗೆ ತರ (ಬುನಾದಿ)ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ಗ್ರಾಮದ ಹೊರವಲಯದಲ್ಲಿ ಗುಡಿಕಟ್ಟೆಯ ಅಣ್ಣತಮ್ಮಂದಿರು ಏಳು ಎಕರೆ ಭೂಮಿಯಲ್ಲಿ ದೇವಸ್ಥಾನವೂ ಸೇರಿದಂತೆ ವಿವಿಧ ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ಹದಿನೈದು ಲಕ್ಷ ರೂಗಳು ಮತ್ತು ಹೋಬಳಿ ಕೇಂದ್ರದಲ್ಲಿ ಗೊಲ್ಲರ ಸಮುದಾಯಭವನಕ್ಕೆ ಇಪ್ಪೆöÊತ್ತೆöÊದು ಲಕ್ಷ ರೂಗಳ ಅನುದಾನ ಮೀಸಲಿದೆ ಗೊಲ್ಲ ಸಮುದಾಯದವರು ಈ ಹಣಕಾಸಿನ ಅನುದಾನ ಬಳಸಿಕೊಂಡು ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು
ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಮಾತನಾಡಿ ಆಂಧ್ರ ಗಡಿಯ ಗೊಲ್ಲರು ಇಂದಿಗೂ ಸಹ ತಮ್ಮ ಕುಲ ದೇವತೆಗಳು ಮತ್ತು ಸಾಂಸ್ಕೃತಿಕ ನಾಯಕರನ್ನ ಪೂಜಿಸುವ ಮುಖೇನ ಅವರಲ್ಲಿನ ಆದರ್ಶಗಳನ್ನು ತಮ್ಮ ಜೀವಿತದಲ್ಲಿ ರೂಢಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂಎಸ್ಲಿ ಅನುದಾನದಲ್ಲಿ ಗೊಲ್ಲರಿಗೆ ದೇವಸ್ಥಾನ ಮತ್ತು ಸಮುದಾಯಭವನಗಳ ನಿರ್ಮಾಣಕ್ಕೆ ಹಣಕಾಸಿನ ಅನುದಾನ ನೀಡುವ ಭರವಸೆ ನೀಡಿದರು
ಮಾಜಿ ಸಚಿವ ಡಿ ಸುಧಾಕರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಚಳ್ಳಕೆರೆ ತಾಲೂಕಿನ ಗೊಲ್ಲರು ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಉಳ್ಳವರು ಇವರು ನಿಯಮಿತವಾಗಿ ಕೈಗೊಳ್ಳುವ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಗಳಿಗೆ ಹಣಕಾಸಿನ ನೆರವು ನೀಡಿ ಈ ಸಮುದಾಯದ ಏಳ್ಗೆಗೆ ಶಿಕ್ಷಣವೇ ಅತ್ಯಂತ ಮುಖ್ಯವಾದದ್ದು ಎಂದರು
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ ಮಾತನಾಡಿ ಪಿಆರ್‌ಪುರ ಹೋಬಳಿಯ ಕೇಂದ್ರದಲ್ಲಿ ಕರಡೇರಗೊಲ್ಲರು ಕೈಗೊಳ್ಳುವ ದೇವಸ್ಥಾನ ನಿರ್ಮಾಣಕ್ಕೆ ಸಂಸದ, ವಿಧಾನಪರಿಷತ್ ಸದಸ್ಯರೂ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಹಣಕಾಸಿಸ ಅನುದಾನ ಮಂಜೂರಾತಿಗೆ ಶ್ರಮಿಸುವ ಭರವಸೆ ನೀಡಿದರು
ಚಳ್ಳಕೆರೆ ತಹಸೀಲ್ದಾರ್ ಎನ್ ರಘುಮೂರ್ತಿ ದಾಸೋಹ ಕಾರ್ಯಕ್ರಮದಲ್ಲಿ ಭಕ್ತರೊಂದಿಗೆ ಪಾಲ್ಗೊಂಡು ಗ್ರಾಮದ ಪಾವಗಡ ರಸ್ತೆಯ ಇಕ್ಕಲೆಲದಲ್ಲೇ ಇರುವ ಈ ದೇವಸ್ಥಾನಕ್ಕೆ ಸರ್ಕಾರದ ನಿರ್ದೇಶನದಂತೆ ನಕಾಷೆ ಕಂಡ ದಾರಿಯಲ್ಲಿ ರಸ್ತೆ ಅಭಿವೃಧ್ದಿ ಮತ್ತು ಮೂಲ ಸೌಕರ್ಯಗಳ ಅಭಿವೃಧ್ದಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು
ಗ್ರಾಮದ ಕರಡೇರ ಗೊಲ್ಲರ ಬೆಡಗಿನವರು ತಮ್ಮ ಕುಲ ಗುರುಗಳಾದ ಗೋಸಿಕೆರೆ ಸಾರ್ವೇಡೇಶ್ವರಮಠದ ಶ್ರೀ ಶ್ರೀ ಶ್ರೀ ಶೈಲಮೂರ್ತಿ ಅವರ ಪೌರೋಹಿತ್ವದಲ್ಲಿ ಗುಡಿಕಟ್ಟೆಯ ಪೂಜಾರಿ, ಗೌಡ ಯಜಮಾನ, ಅಣ್ಣತಮ್ಮಂದಿರು ನೆಂಟರಿಷ್ಟರ ಮತ್ತು ಆಂಧ್ರ ಮತ್ತು ಕರ್ನಾಟಕದ ಸ್ವಾಮಿಯ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ದೇವರ ಮೂರ್ತಿಗಳನ್ನು ಕಾಲ್ನಡಿಗೆಯಲ್ಲೇ ಹೊತ್ತೊಯ್ದು ಭಾನುವಾರ ಮುಂಜಾನೆ ಸನಿಹದ ಗೌರೀಪುರ ಹಳ್ಳದ ನೀರಲ್ಲಿ ಗಂಗಾಪೂಜೆ ಕೈಗೊಂಡು ನಂತರ ವೀರಕರಿಯಣ್ಣ, ವೀರಚಿಕ್ಕಣ್ಣನ ಮರಡಿ ದಿನ್ನೆಯ ಮೇಲೆ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ ಗುಡಿಕಟ್ಟೆಯ ಅಣ್ಣತಮ್ಮಂದಿರು ನೆಂಟರಿಷ್ಟರು ಹಾಲು ತುಪ್ಪ ಎರೆದರು ಭಾನುವಾರ ಸಂಜೆ ವಿವಿಧ ಜನಪದ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ದೇವರ ಮೂರ್ತಿಗಳನ್ನು ಕರೆತಂದು ಹಟ್ಟಿಯ ಗುಡಿಯಲ್ಲಿ ಪ್ರತಿಷ್ಟಾಪಿಸಿ ಪೂಜಿಸಿದರು ಗೊಲ್ಲರಹಟ್ಟಿಯಲ್ಲಿ ಭಾನುವಾರ ರಾತ್ರಿಯಿಡೀ ವಿವಿಧ ಧಾರ್ಮಿಕ ಕಾರ್ಯ ಕೈಗೊಂಡು ಮಣೇವು ಪೂಜೆ ನಡೆಸಿ ಬಾಳೆಹಣ್ಣು, ಸಕ್ಕರೆ ಮತ್ತು ತುಪ್ಪವನ್ನು ಮಿಶ್ರಣ ಮಾಡಿ ನೆರೆದಿದ್ದವರಿಗೆ ಪ್ರಸಾದ ನೀಡಿದರು ರಾತ್ರಿಯಿಡೀ ದೇವರ ವೃತ್ತಾಂತ ಸಾರುವ ಕಥನ ಗೀತೆಗಳನ್ನು ಜನಪದರು ಹಾಡಿದರು
ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ, ಮಾಜಿ ಸಚಿವ ಡಿ ಸುಧಾಕರ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, , ಚಳ್ಳಕೆರೆ ತಹಸೀಲ್ದಾರ್ ಎನ್ ರಘುಮೂರ್ತಿ ಪಿಆರ್‌ಪುರ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ,ಉಪಾಧ್ಯಕ್ಷ ಜಗಳೂರಪ್ಪ, ಜಿಪಂ ಮಾಜಿ ಸದಸ್ಯ ಆರ್ ರಂಗಸ್ವಾಮಿ ಗ್ರಾಪಂ ಸದಸ್ಯರಾದ ಕೃಷ್ಣಪ್ಪ, ರಾಮಣ್ಣ, ಸರೋಜಾ ಕರಡೇರ ಗೊಲ್ಲರ ಕಟ್ಟೇಮನೆಯ ಗೌಡ ಬೋರಪ್ಪ, ಯಜಮಾನ ಈರಣ್ಣ, ಗುಡಿಕಟ್ಟೆಯ ಕೆ ಓಬಣ್ಣ, ದೇವರಾಜು, ಕರಿಯಣ್ಣ, ರಘು, ನರಸಪ್ಪ, ಸಣ್ಣತಿಮ್ಮಕ್ಕ, ಓಬಳದಾಸಪ್ಪ, ಈರಣ್ಣ, ಚಿತ್ತಪ್ಪ, ರಂಗಸ್ವಾಮಿ, ದೊಡ್ಡೋಬಣ್ಣ, ದ್ಯಾಮಣ್ಣ, ಗುಡಿಕಟ್ಟೆಯ ವಿವಿಧೆಡೆಯ ಅಣ್ಣತಮ್ಮಂದಿರು ನೆಂಟರಿಷ್ಟರು ಸಹಸ್ರಾರು ಗ್ರಾಮಸ್ಥರು ಭಾಗವಹಿಸುವರು
ಪೋಟೋ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದ ಹೊರವಲಯದ ವೀರಕರಿಯಣ್ಣ, ವೀರಚಿಕ್ಕಣ್ಣ ಮರಡಿದಿನ್ನೆಯ ಮೇಲೆ ಕರಡೇರಗೊಲ್ಲರ ಆರಾದ್ಯ ದೈವ ಶ್ರೀ ವೀರಕರಿಯಣ್ಣಸ್ವಾಮಿ, ಗೊಲ್ಲಾಳ್ಳೇಶ್ವರಿದೇವಿಯ ದೇವಸ್ಥಾನ ನಿರ್ಮಾಣಕ್ಕೆ ಗುಡಿಕಟ್ಟೆಯ ಹನ್ನೆರೆಡು ಕೈವಾಡಸ್ತರು ಭೂಮಿ ಪೂಜೆ ಕೈಗೊಂಡು ಕರಡೇರ ಗೊಲ್ಲರು ಹಾಲು ತುಪ್ಪ ಸುರಿದರು

Namma Challakere Local News
error: Content is protected !!