ಚಳ್ಳಕೆರೆ : ವಾಲ್ಮೀಕಿ ಜಯಂತಿ ಅಂಗವಾಗಿ ಬೈಕ್ ರ್ಯಾಲಿ
ಚಳ್ಳಕೆರೆ ನಗರದಲ್ಲಿ ನಾಯಕ ಸಮುದಾಯದ ಮುಖಂಡರು ಆಯೋಜಿಸಿದ್ದ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೈಕ್ ರ್ಯಾಲಿ ಅದ್ದೂರಿಯಾಗಿ ಜರುಗಿತು.
ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತ, ನೆಹರು ವೃತ್ತ, ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತ, ಬಳ್ಳಾರಿ ರಸ್ತೆ ಚಳ್ಳಕೆರೆಮ್ಮ ದೇವಸ್ಥಾನ ಪಾವಗಡ ರಸ್ತೆಯ ಮೂಲಕ ವೀರಭದ್ರ ಸ್ವಾಮಿ ದೇವಸ್ಥಾನ ಹೀಗೆ ಪ್ರಮುಖ ರಾಜ ಬೀದಿಗಳಲ್ಲಿ ಜಾಗೃತಿ ಮಾಡುವ ಮೂಲಕ ವಾಲ್ಮೀಕಿ ಜಯಂತಿಗೆ ಪೂರ್ವಭಾವಿಯಾಗಿ ಜಾಗೃತಿ ಮೂಡಿಸಿದರು.
ಇನ್ನು ಈ ಜಾಗೃತಿ ಬೈಕ್ ರ್ಯಾಲಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ, ನಗರಸಭಾ ಸದಸ್ಯರು,
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಪಾಲಯ್ಯ,
ಜಿ.ಟಿ.ವೀರಭದ್ರ ನಾಯಕ, ತಿಪ್ಪೇಸ್ವಾಮಿ, ಸಿಟಿ ಶ್ರೀನಿವಾಸ್, ಪಾಪಣ್ಣ, ಚೇತನ ಕುಮಾರ್ ಕುಮ್ಮಿ, ಆಮ್ ಆದ್ಮಿ ಪಕ್ಷದ ತಾಲೂಕು ಅದ್ಯಕ್ಷ ಪಾಪಣ್ಣ, ವಿಶ್ವನಾಥ್, ಸ್ವಪ್ನ ವೆಂಕಟೇಶ್ , ಸುರೇಶ್ ಸೂರಿ,, ಪ್ರಶಾಂತ್, ವೈ.ಪ್ರಕಾಶ್, ಜ್ಯೋತಿಪ್ರಕಾಶ್, ಕೃಷ್ಣಾ, ಇತರರು ಪಾಲ್ಗೊಂಡಿದ್ದರು
ಆಯೋಜಿಸಿದ್ದ ಬೈಕ್ ರ್ಯಾಲಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ,
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಪಾಲಯ್ಯ, ತಹಶಿಲ್ದಾರ್ ಎನ್. ರಘುಮೂರ್ತಿ ಚಾಲನೆ ನೀಡಿ ಮಾತನಾಡಿದ ಅವರು
ಜಗತ್ತು ಕಂಡ ಮಹಾನ್ ಶ್ರೇಷ್ಠ ಮಹರ್ಷಿ ವಾಲ್ಮೀಕಿ ಜಯಂತ್ಸೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ,
ಮುಂದಿನ ಯುವ ಪೀಳಿಗೆ ಮಹರ್ಷಿ ವಾಲ್ಮೀಕಿ ಪ್ರೇರಣೆಯಿಂದ ಮುನ್ನಡೆಯಬೇಕು, ಅವರು ಹಾಕಿಕಿಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.