ಎನ್.ಉಪ್ಪಾರಹಟ್ಟಿಯಲ್ಲಿ ತೆರವಾದ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ಶಾಂತ ರೀತಿಯಿಂದ ಜರುಗಿದ ಮತದಾನ
ನಾಯಕನಹಟ್ಟಿ:: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್ ಉಪ್ಪಾರಹಟ್ಟಿಯ ಗ್ರಾಮ ಪಂಚಾಯಿತಿ ಸದಸ್ಯೆ ಉಮಾದೇವಿ ಇತ್ತೀಚಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಮತದಾನ ಶಾಂತಿಯುತವಾಗಿ ಜರುಗಿತು.
ತೆರವಾಗಿದ್ದ ಗ್ರಾಮ ಪಂಚಾಯತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಪಾಲಮ್ಮ ಪರ‍್ಣ ಓಬಯ್ಯ ಮತ್ತು ಜಿ.ಆರ್.ಪವಿತ್ರ ಇಬ್ಬರು ಅಭ್ರ‍್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು. ಪ್ರಯುಕ್ತ ಶುಕ್ರವಾರ ಮತದಾನ ನಡೆಯಿತು.ಬೆಳಿಗ್ಗೆ 7 ಗಂಟೆಯಿಂದ ಮತಗಟ್ಟೆಯಲ್ಲಿ ಮತದಾನ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು.
ಗ್ರಾಮದಲ್ಲಿ ಒಟ್ಟು 758 ಮತದಾರರಿದ್ದು, ಈ ಪೈಕಿ 671 ಮತದಾರರು ತಮ್ಮ ಮತ ಚಲಾಯಿಸಿದರು. ಪುರುಷರು, ಮಹಿಳೆಯರು ಪ್ರತ್ಯೇಕ ಸರದಿ ಸಾಲಿನಲ್ಲಿ ಸಹನೆಯಿಂದ ಕಾದು ನಿಂತು ತಮ್ಮ ಅಭ್ರ‍್ಥಿಗಳಿಗೆ ಮತ ಚಲಾಯಿಸಿದರು.
ಮತಗಟ್ಟೆ ಅಧಿಕಾರಿ ವಿ.ರಾಮಾಂಜನೇಯ, ಆರ್. ರೇವಣ್ಣ ,ಎನ್.ಪ್ರಕಾಶ್ ,ಕೆ. ಮಂಜುನಾಥ್ ಕರ‍್ಯನರ‍್ವಹಿಸಿದರು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಚಳ್ಳಕೆರೆಯಲ್ಲಿ ಸೋಮವಾರ ಮತಗಳ ಎಣಿಕೆ ಕರ‍್ಯ ನಡೆಯಲಿದೆ.