ಕೃಷಿ ಚಟುವಟಿಕೆಗಳಿಗೆ ತಂತ್ರಜ್ಞಾನ ಬಳಕೆ : ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ: ಬಿಇಓ ಕೆ.ಎಸ್ ಸುರೇಶ್ ಚಾಲನೆ
ಚಳ್ಳಕೆರೆ : ನಗರದ ಚಿನ್ಮಯ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕರ ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನೂರಾರು ವಿದ್ಯಾರ್ಥಿಗಳ ವಿವಿಧ ಮಾದರಿಗಳನ್ನು ಅಭಿವ್ಯಕ್ತ ಪಡಿಸುವ ಮೂಲಕ ವಿಶೇಷವಾಗಿ ಜರುಗಿತ್ತು
ಜಿಲ್ಲಾ ಪರೀವೀಕ್ಷಕರು, ತಾಲೂಕು ನೋಡಲ್ ಅಧಿಕಾರಿಗಳಾದ ಹೆಚ್.ಗೊವಿಂದಪ್ಪ ಮಾತನಾಡಿ,
ಇಂದಿನ ಮಕ್ಕಳ ಪ್ರತಿಭೆ ಅನಾವರಣ ಗೊಳ್ಳಬೇಕು ಮುಂದಿನ ಉಜ್ವಲ ಭವಿಷ್ಯಕ್ಕೆ ಈಗಿನಿಂದಲೆ ಭದ್ರ ಬುನಾದಿ ಹಾಕಿದರೆ ನಮ್ಮ ದೇಶದ ತಂತ್ರಜ್ಞಾನ ಮುಂದುವರೆಯಲು ಸಹಕರಿಸಿದತೆ ಹಾಗುತ್ತದೆ
ಈಡೀ ಜಿಲ್ಲೆಯಲ್ಲಿ ವೈ ಶಿಷ್ಟ ಪೂರಕ ಕಾರ್ಯಕ್ರಮಗಳು ಚಳ್ಳಕೆರೆ ತಾಲೂಕಿನಲ್ಲಿ ನಡೆಯುತ್ತಿರುವುದು ಶ್ಲಾಘನೀಯ
ಮೊಟ್ಟ ಮೊದಲ ಬಾರಿ ಚಳ್ಳಕೆರೆ ತಾಲೂಕಿನಲ್ಲಿ ವಸ್ತು ಪ್ರದರ್ಶನ ಆಯೋಜಿಸಿರುವುದು ಸಂತಸ ತಂದಿದೆ.
ಕಳೆದ ಎರಡು ವರ್ಷಗಳ ಕೊವಿಡ್ ಕಾರಣದಿಂದ ಇಂತಹ ಕಾರ್ಯಕ್ರಮ ನಡೆದಿರಲಿಲ್ಲ ಆದರೆ ಈಗ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಿದೆ. ಎಂದು ಹೇಳಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ,
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಮಕ್ಕಳನ್ನು ಪ್ರೇರಿಪಿಸಿ,
ಸ್ಥಳಿಯ ಸಮಸ್ಯೆಗಳನ್ನು ನಿವಾರಿಸುವ ಅತೀ ಕಡಿಮೆ ವೆಚ್ಚದಲ್ಲಿ ಮಾದರಿ ತಯಾರಿ ನಡೆಯಬೇಕು, ಆವಿಷ್ಕಾರ ಮಾಡುವ ಮೂಲಕ ವಿಜ್ಞಾನ ವಿಭಿನ್ನತೆ ಕಾಣಬೇಕು
ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಬಾಗಿಯಾಗಿರುವುದು ಸಂತಸ ತಂದಿದೆ,
ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ತಂತ್ರಜ್ಞಾನ ಬಳಿಸಿಕೊಂಡು ದೇಶಕ್ಕೆ ನೆರವಾಗುವುದರ ಮೂಲಕ ಮಾದರಿ ತಯಾರಿಸಿ ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ರಾಜಣ್ಣ ಮಾತನಾಡಿ, ತಾಲೂಕಿನಲ್ಲಿ ಕೇವಲ 70 ರಷ್ಟು ಮಾತ್ರ ಶಾಲೆಗಳು ಬಾಗಿಯಾಗಿವೆ.
ಶಿಕ್ಷಕರಿಕೆ ಕಲಿಕಾ ಚೇತರಿಕೆ ಹಾಗೂ
ವಿಜ್ಞಾನ ಪ್ರಯೋಗ ಇರುವುದರಿಂದ ಒತ್ತಡ ತಂದಿದೆ, ಅತೀ ಕಡಿಮೆ ಸಮಯದಲ್ಲಿ ಉತ್ತಮವಾಗಿ ಮಾದರಿ ತಯಾರಿಸಲು ಸಹಕರಿಸಿದ ಶಿಕ್ಷಕರಿಗೂ ಸಂತಸ ತಂದಿದೆ ಎಂದರು.
ತಹಶಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ,
ಜಗತ್ತಿನಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ಪ್ರೇರೆಪಣಿಗೊಳಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಮಾದರಿ ತಯಾರು ಮಾಡಲು ಸಹಕಾರಿಸಬೇಕು,
ತಾಲ್ಲೂಕಿನ ಆರು ಕ್ಲಬ್ ಗಳು ಮೂಲಕ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಯಶಸ್ವೀಯಾಗಿದ್ಸಾರೆ.
ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ, ಪರೀಕ್ಷೆಯಲ್ಲಿ ಗುಣಮಟ್ಟದ ಫಲಿತಾಂಶಗಳು ನೀಡಬೇಕು
ಮುಂದಿನ ಮಕ್ಕಳ ಬದುಕಿಗೆ ಸುಗಮವಾಗುತ್ತದೆ ಎಂದರು.
ತಾಲೂಕಿನ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದಾರು.