ದೇವರಮರಿಕುಂಟೆ ಗ್ರಾಮದಲ್ಲಿ ಅದ್ದೂರಿ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ

ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದಲ್ಲಿ ಸಮುದಾಯದಿಂದ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಅದ್ದೂರಿ ಜಯಂತೋತ್ಸವ ಕಾರ್ಯಕ್ರದಮಲ್ಲಿ ಚಳ್ಳಕೆರೆ ಬ್ಲಾಂಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ ಮಾತನಾಡಿ ಅವರು
ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿದ ಕೃತಿ ಈಡೀ ಜಗತ್ತಿನಲ್ಲಿ ಎಲ್ಲೂ ಕೂಡ ಇಂಥ ಒಂದು ಮಹಾಕಾವ್ಯವನ್ನು ಕಾಣಲು ಸಾಧ್ಯವಾಗದು ಮಹಾಕಾವ್ಯ ಉಟ್ಟಿದ್ದೆ ಅಹಿಂಸೆಯಿAದ, ಮಹರ್ಷಿ ವಾಲ್ಮೀಕಿಗಳ ಗುರು ನಾರದರು ಇದಕ್ಕೆ ಮೂಲ ಕಾರಣ ಆದ್ದರಿಂದ ಈಡೀ ಪ್ರಪಚಂದಲ್ಲಿ ಇಂತಹದೊAದು ಮಹಾ ಕಾವ್ಯ ನಮಗೆ ದೊರಕಲು ಸಾಧ್ಯವಿಲ್ಲ ಎಂದರು.
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ರಾಮಾಯಣ ಮಹಾಕಾವ್ಯ ವಿಶಿಷ್ಟವಾದದ್ದು ಬೇರೆ ಕಾವ್ಯಗಳಲ್ಲಿ ಮನರಂಜನೆ ಇರುತ್ತದೆ ರಾಮಾಯಣ ಮಹಾಕಾವ್ಯಗಳಲ್ಲಿ ಮನರಂಜನೆ ಜೊತೆಗೆ ಜೀವೋತ್ಕರ್ಷ ಮನೆ ಮಾಡಿದೆ ರಾಮಾಯಣ ಮಹಾಕಾವ್ಯದಲ್ಲಿ ಬರುವಂತಹ ವ್ಯಕ್ತಿಗಳನ್ನು ಎಲ್ಲೂ ಕೂಡ ಮಹರ್ಷಿ ವಾಲ್ಮೀಕಿಗಳು ವೈಭವೀಕರಿಸಿಲ್ಲ, ಆದರೆ ಆ ವ್ಯಕ್ತಿಗಳ ಆದರ್ಶಗಳಿಂದ ಅವರು ಮೇರು ವ್ಯಕ್ತಿಗಳಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ಮಹಾಕಾವ್ಯದಲ್ಲಿ ಬರುವಂತ ಪ್ರತಿಯೊಂದು ಸನ್ನಿವೇಶಗಳು ಕೂಡ ಜಗತ್ತಿಗೆ ದಾರಿ ದೀಪವಾಗಿವೆ ಇವತ್ತು ಜಗತ್ತಿನಲ್ಲಿ ಅಹಿಂಸೆ ನೆಲೆಸಿದೆ ಎಂದರೆ ರಾಮಾಯಣ ಮಹಾಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿಯ ಆದರ್ಶ ತಾಳ್ಮೆ ಭಾತೃತ್ವ ಅಂತಹ ಸಮಾಜದಲ್ಲಿ ಹುಟ್ಟಿರುವಂತ ಪ್ರತಿಯೊಬ್ಬರೂ ಕೂಡ ರಾಮಾಯಣ ಮಹಾಕಾವ್ಯದ ಆದರ್ಶಗಳನ್ನು ಎತ್ತಿ ಹಿಡಿಯಬೇಕು ಎಂದರು.

ಈದೇ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಕುಮಾರಿ ರಂಜಿತಾ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಗ್ರಾಮದ ಮುಖಂಡ ನರಸಿಂಹಣ್ಣ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!