ಕ್ಷಯ ರೋಗಿಗಳಿಗೆ ನೆರವಾಗಿ : ಡಾ.ಬಿಂದುಶ್ರೀ

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳನ್ನು ದತ್ತು ಸ್ವೀಕಾರ ಪಡೆಯುವ ಕಾರ್ಯಕ್ರಮವನ್ನು ದೊಡ್ಡೇರಿ ಗ್ರಾಮ ಪಂಚಾಯಿತಿಯಲ್ಲಿ ನೆರವೇರಿಸಲಾಯಿತು
ಗೋಪನಹಳ್ಳಿ ವ್ಯಾಪ್ತಿಯ ಸುಮಾರು 14ರೋಗಿಗಳು ಕ್ಷಯರೋಗಕ್ಕೆ ತುತ್ತಾಗಿರುವರಲ್ಲಿ ಐದು ಜನರನ್ನು ಚಳ್ಳಕೆರೆ ನಿವಾಸಿಗಳು ಹಾಗೂ ಉಳಿದ ಏಳು ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ , ಡಾಕ್ಟರ್ ಬಿಂದುಶ್ರೀ, ಅಶ್ವಿನಿ, ಲಕ್ಷ್ಮಿ ,ಮಮತಾ, ರಂಜಿತ, ಕೃಷ್ಣಮೂರ್ತಿ, ಸಿಬ್ಬಂದಿಯವರು ಪೌಷ್ಟಿಕ ಆಹಾರದ ಕಿಟ್ ಕೊಡುವ ಮೂಲಕ ಕ್ಷಯರೋಗಿಗಳನ್ನು ದತ್ತು ಸ್ವೀಕರಿಸಿದ್ದಾರೆ
ಇನ್ನು ಮುಂದೆ ಕ್ಷಯರೋಗಕ್ಕೆ ತುತ್ತಾದ ರೋಗಿಗಳನ್ನು ಉಳಿದ ಸಿಬ್ಬಂದಿಯವರು ದತ್ತು ಪಡೆಯಲು ಮುಂದೆ ಬಂದಿರುವುದು ಸಂತೋಷದ ವಿಷಯ ಈಗಾಗಲೇ ಚಳ್ಳಕೆರೆ ತಾಲೂಕಿನಲ್ಲಿ 312 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ತನ್ನ ಸ್ವಂತ ಹಣದಲ್ಲಿ ಸ್ವ ಇಚ್ಛೆಯಿಂದ ಕ್ಷಯ ರೋಗಿಗಳನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬAಧಿಸಿದ ಪ್ರಕರಣಗಳ ದತ್ತು ಸ್ವೀಕರಿಸಿದ್ದು
ಮುಂದೆ ಬರುವಂತಹ ಕ್ಷಯ ರೋಗಿಗಳಿಗೆ ಸಾರ್ವಜನಿಕರು ಸಹಕರಿಸಲು ಹಾಗೂ ಕ್ಷಯರೋಗಕ್ಕೆ ತುತ್ತಾಗಿರುವವರನ್ನೂ ದತ್ತು ಪಡೆದುಕೊಂಡು ಅವರಿಗೆ ಪೌಷ್ಟಿಕ ಆಹಾರವನ್ನು ನೀಡುವ ಮುಖಾಂತರ ಕ್ಷಯರೋಗದಿಂದ ಗುಣಮುಖರಾಗಿಸುವಲ್ಲಿ ಸಹಕರಿಸಲು ಕೋರಲಾಗಿದೆ.

ವೆಂಕಟೇಶ, ಶಿವಣ್ಣ, ವೀರಣ್ಣ, ತಿಪ್ಪೇಸ್ವಾಮಿ, ಪ್ರಭಾರ ಬಿಎಚ್‌ಓ, ತಿಪ್ಪೇಸ್ವಾಮಿ, ರಾಘವೇಂದ್ರ , ಹಿರಿಯ ಚಿಕಿತ್ಸೆ ಮೇಲ್ವಿಚಾರಕರು, ಅಶ್ವಿನಿ ವಿಶಾಲಕ್ಷಿ , ಲಕ್ಷ್ಮಿ, ಕೃಷ್ಣಮೂರ್ತಿ, ಮಮತಾ, ರಂಜಿತ, ಆಶಾ ಕಾರ್ಯಕರ್ತರು,

ದತ್ತು ಸ್ವೀಕಾರಿಸಿದ ಸಾರ್ವಜನಿಕರು ಸರ್ಪಕಿಸಬೇಕಾದ ವಿಳಾಸ ಹಿರಿಯ ಚಿಕಿತ್ಸೆ ಮೇಲ್ವಿಚಾರಕಾರದ ರಾಘವೇಂದ್ರ, ಇವರ ಮೊಬೈಲ್ ನಂಬರ್ 9901701665.

About The Author

Namma Challakere Local News
error: Content is protected !!