ಮನ್ನೆಕೋಟೆ ಗ್ರಾಪಂ.ಯಲ್ಲಿ ಅಕ್ರಮ ಹಣ ವರ್ಗಾವಣೆ :
ಪಿಡಿಓ ವಿರುದ್ಧ ಪ್ರತಿಭಟನೆ

ಚಳ್ಳಕೆರೆ: ತಾಲೂಕಿನ ಮನ್ನೆ ಕೋಟೆ ಗ್ರಾಮ ಪಂಚಾಯತಿಯಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆ ಮಾಡಬೇಕು ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಹಣ ವರ್ಗಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ಮೂಲಕ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನ್ನೆ ಕೋಟೆ ಗ್ರಾಮ ಪಂಚಾಯ ತಿಯಲ್ಲಿ ಎಗ್ಗಿಲ್ಲದೆ ನಕಲಿ ಬಿಲ್ಲು ಸೃಷ್ಟಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮ ಗಾರಿಗೆ ಬೇರೆ ಬೇರೆ ಬಿಲ್ ಸೃಷ್ಟಿಸಿ ಅಕ್ರಮವಾಗಿ ಹಣ ಬಿಡುಗಡೆ ಮಾಡಿ ಕೊಂಡು ವಂಚಿಸುತ್ತಿದ್ದಾರೆ
ಅಲ್ಲದೆ ಗ್ರಾಮ ಪಂಚಾಯತಿಯವರು ಸಾರ್ವಜನಿಕ ಸೇವೆ ಬಿಟ್ಟು ಅವರವರ ಸೇವೆಗೆ ಹಣ ದುರ್ಬಳಕೆಗೆ ಮುಂದಾಗಿದ್ದಾರೆ ಅಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಪುಸ್ತಕದಲ್ಲಿ ನಡುವಳಿ ಸಭೆ ತೀರ್ಮಾನಗಳನ್ನು ನೀತಿ ನಿಯಮಗಳನ್ನು ದಾಖಲಿಸದೆ ಗಾಳಿಗೆ ತೂರಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೂ ಲೆಕ್ಕಪತ್ರ ಪರಿಶೋಧನೆ ಮಾಡಿಸದೆ ಅಧಿಕಾರಿಗಳ ಉದ್ಧಟತನ ಪ್ರದರ್ಶಿಸಿ ಇಡೀ ಗ್ರಾಮ ಪಂಚಾಯಿತಿಗೆ ವಂಚಿಸಿದ್ದಾರೆ ಎಂದರು.
ಪ್ರತಿಭಟನೆ ವೇಳೆ ಜಿಲ್ಲಾ ಪಂಚಾಯತ್ ಹನುಮಂತರೆಡ್ಡಿ ರೇಷ್ಮೆ ಬೆಳೆಗಾರ ತಿಪ್ಪೇಸ್ವಾಮಿ, ಮಹಿಳಾ ಸಂಚಾಲಕರಾದ ಭಾನು ರಂಗಣ್ಣ, ತಳಕು ರವಿಕುಮಾರ್, ಯಶ್, ಮಂಜುನಾಥ್, ರೈತ ಸಂಘದ ಮೊಳಕಾಲ್ಕುರು ಕಾರ್ಯದರ್ಶಿ ಶಿವಮೂರ್ತಿ, ರಾಯಪುರ ಬಸವರಾಜ್, ತಿಪ್ಪರೆಡ್ಡಿ ಇನ್ನೂ ನಿಂಗಣ್ಣ, ವೀರಣ್ಣ ಹಲವಾರು ರೈತಪರ ಸಂಘಟನಾಕಾರರು ಹಾಜರಿದ್ದರು.

Namma Challakere Local News
error: Content is protected !!